ಮುಂಬೈ : ಮುಂಬೈ : ಭಾರತೀಯ ಸಿನಿಮಾ ಸಂಗೀತ ಕ್ಷೇತ್ರದ ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಶಾ ಭೋಸ್ಲೆ ಮುಂಬೈನ ಪ್ರತಿಷ್ಠಿತ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇನ್ನು ನಾಳೆ ಸಂಜೆ 4 ಗಂಟೆಗೆ ಆಶಾ ಭೋಸ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ಮುಂಬೈ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಶಿವಾಜಿ ಪಾರ್ಕ್ ನಲ್ಲಿ ಅಂತಿಮ ಸಂಸ್ಕಾರಕ್ಕೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ ಎಂದು ಆಶಾ ಭೋಸ್ಲೇ ಅವರ ಪುತ್ರ ಆನಂದ ಭೋಸ್ಲೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಆಶಾ ಬೋಸ್ಲೆ ಅವರಿಗೆ 92 ವರ್ಷ ವಯಸ್ಸಾಗಿದ್ದು, ವಯೋಸಜ ಕೆಲವು ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಭೋಸ್ಲೆ ಅವರ ಕುಟುಂಬ ವರ್ಗದವರು, ಆಪ್ತರು ಆಸ್ಪತ್ರೆಗೆ ಧಾವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಇದೀಗ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರು ಭಾರತ ರತ್ನ ಪುರಸ್ಕೃತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ ಆಗಿದ್ದು, ಅಕ್ಕನಂತೆಯೇ ಅದ್ಭುತ ಗಾಯಕಿ ಆಗಿದ್ದಾರೆ.
ಎಂಟು ದಶಕಗಳಿಂದಲೂ ಗಾಯಕ ಕ್ಷೇತ್ರದಲ್ಲಿರುವ ಆಶಾ ಭೋಸ್ಲೆ ಈ ವರೆಗೆ ಸಾವಿರಾರು ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ. ಹಲವಾರು ಲೈವ್ ಶೋಗಳನ್ನು ನೀಡಿದ್ದಾರೆ. ಹಲವು ಸಿಂಗಿಂಗ್ ರಿಯಾಲಿಟಿ ಶೋಗಳಿಗೆ ಜಡ್ಜ್ ಸಹ ಆಗಿದ್ದಾರೆ. ಆಶಾ ಭೋಸ್ಲೆ ಅವರು ತಮ್ಮ 90ನೇ ವಯಸ್ಸಿನಲ್ಲೂ ಸಹ ಲೈವ್ ಸಿಂಗಿಂಗ್ ಶೋಗಳನ್ನು ನೀಡುತ್ತಿದ್ದರು. ಮೂರು-ನಾಲ್ಕು ಗಂಟೆ ಸ್ಟೇಜ್ ಮೇಲೆ ನಿಂತು ಹಾಡುತ್ತಿದ್ದರು. ಆದರೆ ಕಳೆದ ಕೆಲ ತಿಂಗಳುಗಳಿಂದ ಅವರಿಗೆ ವಯೋಸಹಜ ಅನಾರೋಗ್ಯ ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ.








