ಮೈಸೂರು: ಮೈಸೂರು ಮತ್ತು ಮೈಸೂರು ಹೊಸ ಗೂಡ್ಸ್ ಟರ್ಮಿನಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 275ರ ರಿಂಗ್ ರಸ್ತೆಯಲ್ಲಿ ಆರು ಪಥದ ರಸ್ತೆ ಕೆಳಸೇತುವೆ (RUB ಸಂಖ್ಯೆ 293) ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಚಲಿಸುವ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕಾಮಗಾರಿಯ ಅಂಗವಾಗಿ ಗರ್ಡರ್ಗಳನ್ನು ಅಳವಡಿಸಲು ‘ಲೈನ್ ಬ್ಲಾಕ್’ ಮತ್ತು ‘ಪವರ್ ಬ್ಲಾಕ್’ ಇರುವುದರಿಂದ, ಈ ಕೆಳಗಿನ ರೈಲುಗಳು ಭಾಗಶಃ ರದ್ದಾಗಲಿವೆ:
1. ಏಪ್ರಿಲ್ 18, ಮೇ 06 ಮತ್ತು ಮೇ 09, 2026 ರಂದು ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಅರಸೀಕೆರೆಯಿಂದ ಮೈಸೂರಿನವರೆಗೆ ಬರುವ ಬದಲಿಗೆ ಬೆಳಗುಳ ನಿಲ್ದಾಣಕ್ಕೆ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಬೆಳಗುಳ ಮತ್ತು ಮೈಸೂರು ನಿಲ್ದಾಣಗಳ ನಡುವೆ ಈ ರೈಲಿನ ಸಂಚಾರ ಇರುವುದಿಲ್ಲ.
2. ಏಪ್ರಿಲ್ 18, ಮೇ 06 ಮತ್ತು ಮೇ 09, 2026 ರಂದು ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ ಮೈಸೂರಿನಿಂದ ಹೊರಡುವ ಬದಲಿಗೆ ಬೆಳಗುಳ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಮೈಸೂರು ಮತ್ತು ಬೆಳಗುಳ ನಡುವೆ ಈ ರೈಲು ಭಾಗಶಃ ರದ್ದಾಗಿರುತ್ತದೆ.
ಬೆಂಗಳೂರಲ್ಲಿ ‘ಝಾಂಬಿ ಡ್ರಗ್ಸ್’ ಸುಳ್ಳು ಸುದ್ದಿ: ವಿಡಿಯೋ ಹರಿಬಿಟ್ಟಿದ್ದ ಯುವಕ ಪೊಲೀಸ್ ವಶಕ್ಕೆ








