Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಏ.16ರಂದು ‘ರಾಜ್ಯ ಸಚಿವ ಸಂಪುಟ’ದ ಮಹತ್ವದ ಸಭೆ ನಿಗದಿ

10/04/2026 3:51 PM

Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ‘ಡಲ್ಕೋಫ್ಲೆಕ್ಸ್‌’

10/04/2026 3:49 PM

ಕಾಂತಾರ ದೈವಪಾತ್ರಕ್ಕೆ ಅಪಮಾನ ಆರೋಪ : ಪರಿಷ್ಕೃತ ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವೆ ಎಂದ ರಣವೀರ್ ಸಿಂಗ್

10/04/2026 3:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ‘ಡಲ್ಕೋಫ್ಲೆಕ್ಸ್‌’
INDIA

Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ‘ಡಲ್ಕೋಫ್ಲೆಕ್ಸ್‌’

By kannadanewsnow0910/04/2026 3:49 PM

ನವದೆಹಲಿ: ಮನುಷ್ಯನನ್ನು ಮತ್ತೆ ಚಂದ್ರನ ಕಕ್ಷೆಗೆ ಕಳುಹಿಸಿದ ನಾಸಾದ ಐತಿಹಾಸಿಕ ‘ಆರ್ಟೆಮಿಸ್ 2’ ಬಾಹ್ಯಾಕಾಶ ಯಾನ ಇದೀಗ ಅಂತಿಮ ಹಂತದಲ್ಲಿದೆ. ಈ 10 ದಿನಗಳ ರೋಚಕ ಪಯಣದಲ್ಲಿ ಗಗನಯಾತ್ರಿಗಳ ಆರೋಗ್ಯ ಕಾಪಾಡಲು ಅವರ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಜೀರ್ಣಕ್ರಿಯೆ ಹಾಗೂ ಮಲಬದ್ಧತೆ ನಿವಾರಕ ಔಷಧ ‘ಡಲ್ಕೋಲಾಕ್ಸ್’ ಕೂಡ ಸ್ಥಾನ ಪಡೆದಿದೆ. ಭಾರತದಲ್ಲಿ ಈ ಔಷಧಿಯನ್ನು ‘ಡಲ್ಕೋಫ್ಲೆಕ್ಸ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಬಾಹ್ಯಾಕಾಶದಲ್ಲಿ ಮಲಬದ್ಧತೆ ಸಮಸ್ಯೆ ಕಾಡುವುದೇಕೆ?

ಬಾಹ್ಯಾಕಾಶ ಪ್ರಯಾಣ ಎಷ್ಟೇ ಅದ್ಭುತವಾಗಿದ್ದರೂ, ಅಲ್ಲಿಯೂ ಮನುಷ್ಯನ ಹೊಟ್ಟೆ ಮತ್ತು ಜೀರ್ಣಕ್ರಿಯೆ ಭೂಮಿಯ ನಿಯಮಗಳನ್ನೇ ಪಾಲಿಸುತ್ತದೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ. ಇದರಿಂದಾಗಿ ಕರುಳಿನ ಚಲನೆ ತುಂಬಾ ನಿಧಾನವಾಗುತ್ತದೆ. ಜೊತೆಗೆ ಗಗನಯಾತ್ರಿಗಳಿಗೆ ಅಲ್ಲಿ ಓಡಾಡಲು ಜಾಗ ಕಡಿಮೆ. ಹೀಗಾಗಿ ಅವರು ವಿಶೇಷ ಆಹಾರವನ್ನು ಮಾತ್ರ ಸೇವಿಸಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದ ಅವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು ಸಾಮಾನ್ಯ. ಹೀಗಾಗಿಯೇ ನಾಸಾ ಈ ನಂಬಿಕಾರ್ಹ ಔಷಧಿಯನ್ನು ಜೊತೆಗೆ ಕಳುಹಿಸಿದೆ.

ನಾಸಾದ ಏಕೈಕ ಆಯ್ಕೆ ಡಲ್ಕೋಲಾಕ್ಸ್

ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ನೀಡಲು ನಾಸಾದ ಪ್ರಥಮ ಚಿಕಿತ್ಸಾ ಕಿಟ್‌ನಲ್ಲಿರುವ ಏಕೈಕ ಬ್ರ್ಯಾಂಡ್ ‘ಡಲ್ಕೋಲಾಕ್ಸ್’ (ಭಾರತದಲ್ಲಿ ಡಲ್ಕೋಫ್ಲೆಕ್ಸ್). ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಹಲವು ದಶಕಗಳಿಂದ ಗಗನಯಾತ್ರಿಗಳು ಇದನ್ನು ಬಳಸುತ್ತಿದ್ದಾರೆ.

ಇದರಲ್ಲಿರುವ ‘ಬಿಸಾಕೋಡಿಲ್’ ಎಂಬ ಅಂಶವು ಕರುಳಿನ ಸಹಜ ಚಲನೆಯನ್ನು ಉತ್ತೇಜಿಸಿ, ಕೇವಲ 6 ಗಂಟೆಗಳಲ್ಲಿ ನಿರಾಳತೆ ನೀಡುತ್ತದೆ. ಇದು ಚಟವಾಗುವ ಔಷಧಿ ಅಲ್ಲದೇ ಇರುವುದರಿಂದ ಇದು ಬಳಕೆಗೆ ಅತ್ಯಂತ ಸುರಕ್ಷಿತವಾಗಿದೆ.

ಈ ಬಗ್ಗೆ ಮಾತನಾಡಿರುವ ಒಪೆಲ್ಲಾ ಇಂಡಿಯಾ ಕಂಪನಿಯ ನಿರ್ದೇಶಕಿ ನೂಪುರ್ ಗುರ್ಬಕ್ಸಾನಿ, “ನಾಸಾದ ಈ ಮಹತ್ವದ ಯೋಜನೆಯಲ್ಲಿ ನಮ್ಮ ಬ್ರ್ಯಾಂಡ್ ಸೇರ್ಪಡೆಯಾಗಿರುವುದು ವೈದ್ಯರು ಮತ್ತು ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷ, ಮನೆಯಿಂದ ಹಿಡಿದು ಬಾಹ್ಯಾಕಾಶದವರೆಗೂ, ಎಲ್ಲೆಡೆಯೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಇದು ಎತ್ತಿ ತೋರಿಸುತ್ತದೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಭೂಮಿಯ ಮೇಲಿರುವಾಗಲೂ ಒತ್ತಡ, ದೀರ್ಘಕಾಲದ ಪ್ರಯಾಣ ಅಥವಾ ದಿನಚರಿಯಲ್ಲಿ ಬದಲಾವಣೆಯಾದಾಗ ಜನರಿಗೆ ಮಲಬದ್ಧತೆ ಕಾಡುತ್ತದೆ. ಇಂತಹ ಸಮಯದಲ್ಲಿಯೂ ಇದು ಅತ್ಯುತ್ತಮ ಪರಿಹಾರವಾಗಿದೆ.

ಭಾರತದಲ್ಲಿಯೂ ಲಭ್ಯ ‘ಡಲ್ಕೋಫ್ಲೆಕ್ಸ್’

ಭಾರತದಲ್ಲಿ 2017ರಲ್ಲಿ ‘ಡಲ್ಕೋಲಾಕ್ಸ್’ ಹೆಸರನ್ನು ‘ಡಲ್ಕೋಫ್ಲೆಕ್ಸ್’ ಎಂದು ಬದಲಾಯಿಸಲಾಯಿತು. ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಇದು ವಿವಿಧ ರೂಪಗಳಲ್ಲಿ ಲಭ್ಯವಿದೆ:

* 5 mg ಮಾತ್ರೆ: ರಾತ್ರಿ ಸೇವಿಸಿದರೆ 6-8 ಗಂಟೆಗಳಲ್ಲಿ ಅಂದರೆ ಬೆಳಗಾಗುವಷ್ಟರಲ್ಲಿ ಸುಗಮ ಪರಿಹಾರ ನೀಡುತ್ತದೆ.
* 5 mg ಸಪೊಸಿಟರಿ: 0 ದಿಂದ 10 ವರ್ಷದೊಳಗಿನ ಮಕ್ಕಳಿಗೆ ಇದು ಶೀಘ್ರ ಪರಿಹಾರ ನೀಡುತ್ತದೆ.
* 10 mg ಸಪೊಸಿಟರಿ : 10 ವರ್ಷ ಮೇಲ್ಪಟ್ಟವರಿಗೆ ಹಾಗೂ ವಯಸ್ಕರಿಗೆ ತಕ್ಷಣದ ಪರಿಹಾರ ನೀಡಲು ಇದು ಉಪಯುಕ್ತವಾಗಿದೆ.

ಇದಕ್ಕೆ ಕೇಂದ್ರ ಸಚಿವ H.D.ಕುಮಾರಸ್ವಾಮಿ ಯಾವಾಗ್ಲೂ ಜನರಿಗೆ ಇಷ್ಟ ಆಗೋದು! ಅದೇನು ಅಂತ ಈ ಸುದ್ದಿ ಓದಿ!

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

Share. Facebook Twitter LinkedIn WhatsApp Email

Related Posts

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ರಂಜಿತ್‌ಗೆ ಜಾಮೀನು ಮಂಜೂರು | Filmmaker Ranjith

10/04/2026 3:24 PM1 Min Read

ಸರ್ಕಾರದ ಸರ್ವಾಧಿಕಾರಿ ಧೋರಣೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ: ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ

10/04/2026 2:46 PM1 Min Read

ಹಿಂದೂ ದೇವತೆಗಳು ಹಾಗೂ ಸಾವರ್ಕರ್ ವಿರುದ್ಧದ ಟ್ವೀಟ್: ಎಕ್ಸ್ (X) ಸಂಸ್ಥೆಗೆ ಕಾನೂನು ರಕ್ಷಣೆ ಕಳೆದುಕೊಳ್ಳುವ ಭೀತಿ!

10/04/2026 2:35 PM1 Min Read
Recent News

BREAKING: ಏ.16ರಂದು ‘ರಾಜ್ಯ ಸಚಿವ ಸಂಪುಟ’ದ ಮಹತ್ವದ ಸಭೆ ನಿಗದಿ

10/04/2026 3:51 PM

Artemis II: ನಾಸಾದ ಚಂದ್ರಯಾನದಲ್ಲಿ ಗಗನಯಾತ್ರಿಗಳ ಜೊತೆ ಬಾಹ್ಯಾಕಾಶಕ್ಕೆ ಹಾರಿದ ‘ಡಲ್ಕೋಫ್ಲೆಕ್ಸ್‌’

10/04/2026 3:49 PM

ಕಾಂತಾರ ದೈವಪಾತ್ರಕ್ಕೆ ಅಪಮಾನ ಆರೋಪ : ಪರಿಷ್ಕೃತ ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವೆ ಎಂದ ರಣವೀರ್ ಸಿಂಗ್

10/04/2026 3:43 PM

ಇದಕ್ಕೆ ಕೇಂದ್ರ ಸಚಿವ H.D.ಕುಮಾರಸ್ವಾಮಿ ಯಾವಾಗ್ಲೂ ಜನರಿಗೆ ಇಷ್ಟ ಆಗೋದು! ಅದೇನು ಅಂತ ಈ ಸುದ್ದಿ ಓದಿ!

10/04/2026 3:43 PM
State News
KARNATAKA

BREAKING: ಏ.16ರಂದು ‘ರಾಜ್ಯ ಸಚಿವ ಸಂಪುಟ’ದ ಮಹತ್ವದ ಸಭೆ ನಿಗದಿ

By kannadanewsnow0910/04/2026 3:51 PM KARNATAKA 1 Min Read

ಬೆಂಗಳೂರು: ಕರ್ನಾಟಕ ಸರ್ಕಾರದ 2026ನೇ ಸಾಲಿನ 10ನೇ ಸಚಿವ ಸಂಪುಟ ಸಭೆಯನ್ನು ಇದೇ ಏಪ್ರಿಲ್ 16, ಗುರುವಾರದಂದು ಕರೆಯಲಾಗಿದೆ. ಸಭೆಯ…

ಕಾಂತಾರ ದೈವಪಾತ್ರಕ್ಕೆ ಅಪಮಾನ ಆರೋಪ : ಪರಿಷ್ಕೃತ ಕ್ಷಮಾಪಣಾ ಪ್ರಮಾಣ ಪತ್ರ ಸಲ್ಲಿಸುವೆ ಎಂದ ರಣವೀರ್ ಸಿಂಗ್

10/04/2026 3:43 PM

ಇದಕ್ಕೆ ಕೇಂದ್ರ ಸಚಿವ H.D.ಕುಮಾರಸ್ವಾಮಿ ಯಾವಾಗ್ಲೂ ಜನರಿಗೆ ಇಷ್ಟ ಆಗೋದು! ಅದೇನು ಅಂತ ಈ ಸುದ್ದಿ ಓದಿ!

10/04/2026 3:43 PM

BREAKING: ಬೆಂಗಳೂರು: ಮಾಜಿ ಕಾರ್ಪೊರೇಟರ್ ವಿರುದ್ಧ ವಂಚನೆ ಆರೋಪ: ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ!

10/04/2026 3:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.