ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಒಬ್ಬಳು ಸಾವನಪ್ಪಿದ್ದಾಳೆ. ಇದೀಗ ಇವೊಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾವನ್ನಪ್ಪಿದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಾಟ್ಸಪ್ ಸ್ಟೇಟಸ್ ನಲ್ಲಿ ಒಂದು ಸ್ಟೇಟಸ್ ಹಾಕಿದ್ದು ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಆತ್ಮಹತ್ಯೆ ಮಾಡಿಕೊಂಡ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನುಶ್ರೀ. ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ‘3PM fielding set’ ಎಂದು ಸ್ಟೇಟಸ್ ಹಾಕಿದ್ದಳು ತನುಶ್ರೀ ಸ್ಟೇಟಸ್ ನೋಡಿ ಆಕೆಯ ಸ್ನೇಹಿತೆ ಮನೆಯ ಬಳಿಗೆ ದೌಡಾಯಿಸಿ ಬಂದಿದ್ದಾಳೆ. ಸ್ನೇಹಿತೆ ಮನೆಯ ಬಳಿ ಹೋಗುವಷ್ಟರಲ್ಲಿ ತನುಶ್ರೀ ನೇಣಿಗೆ ಶರಣಾಗಿದ್ದಾಳೆ. ಕೂಡಲೇ ತನುಶ್ರೀ ಸ್ನೇಹಿತೆ ತನ್ನ ತಂದೆಗೆ ಕರೆ ಮಾಡಿದ್ದಾಳೆ ಬಳಿಕ ಬಾಗಿಲು ಒಡೆದು ನೇಣುಕುಣಿಕೆಯಿಂದ ತನುಶ್ರೀಯನ್ನ ಕೆಳಗಡೆ ಇಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಇನ್ನು ತನುಶ್ರೀ ಸ್ನೇಹಿತೆ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಾನು ಕಾಮರ್ಸ್ ಸ್ಟೂಡೆಂಟ್ ಆಗಿದ್ದು ಅವಳು ಸೈನ್ಸ್ ಸ್ಟೂಡೆಂಟ್ ಆಗಿದ್ದಳು. ಆಕೆಗೆ ದ್ವಿತೀಯ ಪಿಯುಸಿ ಫಲಿತಾಂಶದ ಭಯ ಇತ್ತು. ಗಣಿತ ಮತ್ತು ಫಿಸಿಕ್ಸ್ ನಲ್ಲಿ ಆಕೆಗೆ ಫೇಲ್ ಆಗುವ ಭಯ ಇತ್ತು. ನಾನು ಕೇಳಿದಾಗ ಎಲ್ಲಾ ಚೆನ್ನಾಗಿ ಬರೆದಿದ್ದೇನೆ ಅಂತ ಹೇಳಿದ್ದಳು. ಆದರೆ ಗಣಿತ ಮತ್ತು ಫಿಸಿಕ್ಸ್ ನಲ್ಲಿ ಆಕೆಗೆ ಫೇಲ್ ಆಗುವ ಭಯ ಇತ್ತು. ದಯವಿಟ್ಟು ಯಾರು ಈ ರೀತಿ ಮಾಡಿಕೊಳ್ಳಬೇಡಿ. ಈ ರೀತಿ ಫೇಲಾದರೂ ಸಪ್ಲಿಮೆಂಟರಿಯಲ್ಲಿ ಬರೆದು ಪಾಸ್ ಆಗಬಹುದು ಎಂದು ತಿಳಿಸಿದರು.








