ಬೆಂಗಳೂರು : ರಾಜ್ಯದ ಹಲವಡೆ ಗ್ಯಾಸ್ ಸಿಲಿಂಡರ್ ಗಳ ಅಭಾವ ಹಿನ್ನೆಲೆಯಲ್ಲಿ, ಇಂದು BPCL, HPCL, LOCL ಅಧಿಕಾರಿಗಳ ಜೊತೆಗೆ ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಸಬಿ ನೆಡೆಸಿದರು ಬೆಂಗಳೂರಿನ ವಸಂತನಗರದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಭೆಯಲ್ಲಿ ಸಭೆ ನಡೆಸಿದರು ಸಿಲಿಂಡರ್ ಬಗ್ಗೆ ಮುನಿಯಪ್ಪ ಮಾಹಿತಿ ಪಡೆದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಮುನಿಯಪ್ಪ ಆಟೋ ಗ್ಯಾಸ್ ನಲ್ಲಿ ಸುಧಾರಣೆ ಆಗಿಲ್ಲ ಈ ವಿಚಾರವಾಗಿ ನಾವು ಸಹ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ವಾಣಿಜ್ಯ ಸಿಲಿಂಡರ್ ನಲ್ಲಿ ಸುಧಾರಣೆಯಾಗಿದೆ ಕೇಂದ್ರ ಜವಾಬ್ದಾರಿಯಿಂದ ನಿರ್ವಹಣೆ ಮಾಡಿಲ್ಲ. ಬೆಂಗಳೂರಿನಲ್ಲಿ ಒಂದು ಪಾಯಿಂಟ್ 60000 ಆಟೋ ಬಂಕ್ ಏಜೆನ್ಸಿಗಳಿವೆ, ಕರ್ನಾಟಕದಲ್ಲಿ ಅತಿ ಹೆಚ್ಚು ಆಟೋ ಗ್ಯಾಸ್ ಬಳಕೆ ಮಾಡಲಾಗುತ್ತದೆ ಕ್ರಮ ತೆಗೆದುಕೊಂಡು ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸಬೇಕು.
ಗೃಹ ಬಳಕೆ ಸಿಲಿಂಡರ್ 26ನೇ ದಿನ ಸಿಗುವಂತೆ ಮಾಡಬೇಕು 26ನೇ ದಿನಕ್ಕೆ ಬುಕ್ ಮಾಡಿದ ನಂತರ ಸಿಲಿಂಡರ್ ವಿತರಣೆ ಮಾಡಲಾಗುತ್ತದೆ ಮೊದಲು ಬುಕ್ ಆದ ವಾರಕ್ಕೆ 300 ಕೊಡಲಾಗುತ್ತಿತ್ತು. ಇದೀಗ 26ನೇ ದಿನಕ್ಕೆ ಬುಕ್ ಸಿಲಿಂಡರ್ ಮಾಡಿದ ನಂತರ ಸಿಲಿಂಡರ್ ವಿತರಣೆ ಮಾಡಬೇಕು ಒಂದು ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದರು.
ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ಸುಧಾರಣೆ ಆಗಿದ್ದು, ಆದರೆ ಆಟೋ ಎಲ್ ಪಿ ಜಿ ಗ್ಯಾಸ್ ನಲ್ಲಿ ಸುಧಾರಣೆ ಆಗಿಲ್ಲ. ಆಟೋ ಚಾಲಕರಿಗೆ ಸಹಾಯ ಮಾಡುವ ವಿಚಾರದ ಬಗ್ಗೆ ಚರ್ಚೆ ಮಾಡಿದ್ದು ಆಟೋ ಗ್ಯಾಸ್ ಗೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಪಡಿಸಿದರು. ಆಸ್ಪತ್ರೆ, ಶಾಲೆ ಏರ್ಪೋರ್ಟ್ಗೆ ವಾಣಿಜ್ಯ ಸಿಲಿಂಡರ್ ಸಿಗುತ್ತಿದೆ ರಾಜ್ಯದಲ್ಲಿ 3 ಲಕ್ಷ ಜನ ಆಟೋ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ. ಗ್ಯಾಸ್ ದರ ಏರಿಕೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.








