ದಕ್ಷಿಣಕನ್ನಡ : ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು (ಏಪ್ರಿಲ್ 09) ಪ್ರಕಟವಾಗಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದಾಗಿದೆ. ದಿಗ ಫಲಿತಾಂಶ ಪತ್ರವಾಗಿದ್ದು ಈ ಬಾರಿಯೂ ಕೂಡ ಮತ್ತೊಮ್ಮೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
2025 26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇದೀಗ ಪ್ರಕಟವಾಗಿದ್ದು ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ದಿಶಾ ರಾಜ್ಯಕ್ಕೆ ಟಾಪರ್ ಹೊರಹೊಮ್ಮಿದ್ದಾರೆ.
ಇನ್ನು ಕಲಾ ವಿಭಾಗದಲ್ಲಿ ಸಂಗೀತ ಎನ್ನುವ ವಿದ್ಯಾರ್ಥಿನಿ 600 ಕ್ಕೆ 598 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಅದೇ ರೀತಿಯಾಗಿ ತುಮಕೂರು ವಿದ್ಯಾವಾಹಿನಿ ಕಾಲೇಜ್, ವಿದ್ಯಾರ್ಥಿಯಾಗಿರುವ ರೋಹನ್ ಎಂಬ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 597 ಪಡೆದು ಎರಡನೇ ಸ್ಥಾನ ಪಡೆದಿದ್ದಾನೆ. ಇನ್ನು ವಿಜ್ಞಾನ ವಿಷಯದಲ್ಲಿ 600 ಕ್ಕೆ 593 ಅಂಕ ಗಳಿಸಿ ಕೋಲಾರದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿ ಶ್ರೀಲಯ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.ವಿಜ್ಞಾನ ವಿಷಯದಲ್ಲಿ ಶೇಕಡಾ 98 ರಷ್ಟು ಅಂಕ ಪಡೆdu ಸಾಧನೆ ಮಾಡಿದ್ದಾರೆ








