Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!
KARNATAKA

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

By kannadanewsnow57

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಅತೀ ದಾರುಣ ಹಾಗೂ ಮನಕಲಕುವ ಘಟನೆಯೊಂದು ವರದಿಯಾಗಿದೆ. ಪತಿ ಮೃತಪಟ್ಟ ವಿಷಯವೇ ತಿಳಿಯದ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು, ಬರೋಬ್ಬರಿ 10 ದಿನಗಳ ಕಾಲ ಕೊಳೆತ ಶವದೊಂದಿಗೇ ವಾಸವಿದ್ದ ದಿಗಿಲು ಹುಟ್ಟಿಸುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರ:
ಕೊಟ್ಟಿಗೆಹಾರ ನಿವಾಸಿ ಸಿರಿಲ್ ಮೋನಿಸ್ (77) ಮೃತಪಟ್ಟ ದುರ್ದೈವಿ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಸುಮಾರು 10 ದಿನಗಳ ಹಿಂದೆಯೇ ಮಲಗಿದ್ದಲ್ಲಿಯೇ ಕೊನೆಯುಸಿರೆಳೆದಿದ್ದರು. ಆದರೆ ಮನೆಯಲ್ಲಿದ್ದ ಇವರ ಪತ್ನಿ ಮಾನಸಿಕ ಅಸ್ವಸ್ಥರಾಗಿದ್ದರಿಂದ, ಪತಿ ಮೃತಪಟ್ಟಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಅವರಿಗಿರಲಿಲ್ಲ. ಪತಿ ಗಾಢ ನಿದ್ರೆಯಲ್ಲಿದ್ದಾರೆ ಎಂದು ಭಾವಿಸಿದ್ದ ಅವರು, ಹತ್ತು ದಿನಗಳ ಕಾಲ ಶವದ ಪಕ್ಕದಲ್ಲೇ ಕಾಲ ಕಳೆದಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಕೆಲವು ದಿನಗಳಿಂದ ಮನೆಯಿಂದ ಅಸಹನೀಯ ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ, ಸಂಪೂರ್ಣವಾಗಿ ಕೊಳೆತು ಹೋಗಿದ್ದ ಶವದ ಪಕ್ಕದಲ್ಲೇ ಪತ್ನಿ ಕುಳಿತಿರುವುದು ಕಂಡುಬಂದಿದೆ. ಈ ಭೀಕರ ದೃಶ್ಯ ಕಂಡು ಸ್ಥಳೀಯರು ಮತ್ತು ಪೊಲೀಸರು ದಸ್ತಗಿರಿಯಾಗಿದ್ದಾರೆ.

ಮಕ್ಕಳಿಗೂ ಸುಳಿವು ನೀಡದ ತಾಯಿ:
ಮೃತ ಮೋನಿಸ್ ಅವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ. ಮಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ಪ್ರತಿದಿನ ತಾಯಿಗೆ ಫೋನ್ ಮಾಡಿ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದನು. ಆದರೆ ಮಾನಸಿಕ ಅಸ್ವಸ್ಥತೆಯಲ್ಲಿದ್ದ ತಾಯಿ, ಪ್ರತಿ ಬಾರಿಯೂ “ಅಪ್ಪ ಚೆನ್ನಾಗಿದ್ದಾರೆ, ಮಲಗಿದ್ದಾರೆ” ಎಂದೇ ಉತ್ತರಿಸುತ್ತಿದ್ದರು. ತಾಯಿಯ ಮಾತನ್ನು ನಂಬಿದ್ದ ಮಗನಿಗೆ ತಂದೆಯ ಸಾವಿನ ಸುಳಿವೇ ಸಿಕ್ಕಿರಲಿಲ್ಲ.

ಪ್ರಸ್ತುತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಸಂಭವಿಸಿದ ಈ ದುರಂತ ಇಡೀ ಜಿಲ್ಲೆಯನ್ನೇ ಕಂಗೆಡಿಸಿದೆ.

SHOCKING: The wife who didn't know that her husband died and got worms: The mentally ill wife spent 10 days with the rotting corpse!
Share. Facebook Twitter LinkedIn WhatsApp Email

Related Posts

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

1 Min Read

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

1 Min Read

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

1 Min Read
Recent News

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

BREAKING: ‘​ಇ-ಕಾಮರ್ಸ್ ವೇದಿಕೆ’ಗಳಲ್ಲಿ ಸ್ಫೋಟಕ, ಅಪಾಯಕಾರಿ ರಾಸಾಯನಿಕಗಳ ಮಾರಾಟ ನಿಷೇಧಿಸಿದ ಸಿಸಿಪಿಎ

State News
KARNATAKA

ಜೂನ್.4ರಿಂದ ದಕ್ಷಿಣ ಆಫ್ರಿಕಾದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ: ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕಳೆದ ಏಪ್ರಿಲ್ 18ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಶಿವಂಗಿಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಜೂನ್ 4ರಿಂದ…

BIG NEWS: ಸ್ನ್ಯಾಪ್‌ಚಾಟ್ ಪ್ರೀತಿ, ಎರಡೇ ತಿಂಗಳಿಗೆ ಮುನಿಸು: ‘ಗಂಡ ಬೇಕು’ ಎಂದು ಠಾಣೆ ಮೆಟ್ಟಿಲೇರಿದ ಪತ್ನಿ!

BREAKING : ಚಿತ್ರದುರ್ಗದಲ್ಲಿ ಬೊಲೆರೋ-ಲಾರಿ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಮೂವರ ದುರ್ಮರಣ!

BREAKING : ನಾನು ಕಮಿಟ್ ಆಗಿದ್ದೇನೆ, ರಾಜೀನಾಮೆ ಕೊಡ್ತೀನಿ ಅಂತ ಸಿಎಂ ಹೇಳಿದ್ದಾರೆ : ಶಾಸಕ ಆರ್ ವಿ ದೇಶಪಾಂಡೆ ಹೇಳಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.