ವಿಜಯಪುರ : ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ ಆಗಿದೆ. ಜಿಲ್ಲೆಯ ಹಲವಡೆ ಮತ್ತೆ ಭೂಕಂಪನದ ಅನುಭವ ಆಗಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ. ಕಳ್ಳ ಕವಟಗಿ, ಬಾಬಾನಗರ ಬಿಜ್ಜರಗಿ, ಸೋಮದೇವರ ಹಟ್ಟಿ ಹಬನೂರು, ಟಕ್ಕಳಿಕೆ ಸೇರಿದಂತೆ ಹಲವಡೆ ಭೂಕಂಪನ ಅನುಭವ ಆಗಿದೆ.
ತಿಕೋಟ ತಾಲೂಕಿನ ಗ್ರಾಮದಲ್ಲಿ ಈ ಒಂದು ಭೂಕಂಪನ ನಡೆದಿದ್ದು ಬೆಳಿಗ್ಗೆ 8:21 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಅಲ್ಲದೆ ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ ಮಹಾರ ಮಹಾರಾಷ್ಟ್ರದ ಮರಬಗಿ ತಿಕ್ಕುಂಡಿಯಲ್ಲೂ ಭೂಮಿ ಕಂಪಿಸಿವೆ.








