ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ನಿರ್ಧಾರಗಳು ಮತ್ತು ಇರಾನ್ ಜೊತೆಗಿನ ಮಾತುಕತೆಯ ಹಾದಿಯು, ಅರಿವಿಲ್ಲದೆಯೇ ಇರಾನ್ ಪಾಲಿಗೆ ದೊಡ್ಡ ರಾಜತಾಂತ್ರಿಕ ವಿಜಯವಾಗಿ ಪರಿಣಮಿಸಿದೆಯೇ ಎಂಬ ಚರ್ಚೆ ಈಗ ಜಾಗತಿಕ ಮಟ್ಟದಲ್ಲಿ ಆರಂಭವಾಗಿದೆ. ಇರಾನ್ ಮಂಡಿಸಿದ 10 ಅಂಶಗಳ ಪ್ರಸ್ತಾವನೆ ಮತ್ತು ಇಸ್ಲಾಮಾಬಾದ್ ಮಾತುಕತೆಗೆ ಅಮೆರಿಕ ಒಪ್ಪಿಗೆ ನೀಡಿರುವುದು ಇರಾನ್ಗೆ ಹೊಸ ಬಲ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್ ವಿಧಿಸಿದ ಷರತ್ತುಗಳಿಗೆ ಅಮೆರಿಕ ಮಣಿಯುತ್ತಿರುವುದು, ಇರಾನ್ ಅನ್ನು ಪಶ್ಚಿಮ ಏಷ್ಯಾದ ಅಘೋಷಿತ ನಾಯಕನನ್ನಾಗಿ ಬಿಂಬಿಸುತ್ತಿದೆ. ಇದು ಇರಾನ್ ಪಾಲಿಗೆ ಪರಮಾಣು ಬಾಂಬ್ಗಿಂತಲೂ ದೊಡ್ಡ ‘ರಾಜತಾಂತ್ರಿಕ ಅಸ್ತ್ರ’ವಾಗಿ ಪರಿಣಮಿಸಿದೆ.
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿಧಿಸಿರುವ ‘ಕ್ರಿಪ್ಟೋ ಟೋಲ್’ ಮತ್ತು ಅಮೆರಿಕದ ಮೌನವು, ಡಾಲರ್ ಸಾಮ್ರಾಜ್ಯಕ್ಕೆ ಸವಾಲು ಹಾಕಲು ಇರಾನ್ಗೆ ವೇದಿಕೆ ಒದಗಿಸಿಕೊಟ್ಟಂತಾಗಿದೆ. ಟ್ರಂಪ್ ಅವರು ಇರಾನ್ ಜೊತೆ ಸಂಧಾನಕ್ಕೆ ಮುಂದಾಗುತ್ತಿರುವುದು ಇಸ್ರೇಲ್ನ ಅಸಮಾಧಾನಕ್ಕೆ ಕಾರಣವಾಗಿದೆ. ಮಿತ್ರರಾಷ್ಟ್ರಗಳ ನಡುವಿನ ಈ ಬಿರುಕನ್ನೇ ಇರಾನ್ ತನ್ನ ಅತ್ಯಂತ ಪ್ರಬಲ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕವು ಸಂಧಾನದ ಹಾದಿ ಹಿಡಿದಿರುವುದರಿಂದ, ಗಲ್ಫ್ ರಾಷ್ಟ್ರಗಳು ಕೂಡ ಈಗ ಇರಾನ್ ಜೊತೆ ಸಂಬಂಧ ಸುಧಾರಿಸಿಕೊಳ್ಳಲು ಮುಂದಾಗುತ್ತಿವೆ. ಇದು ಇರಾನ್ನ ಪ್ರಾದೇಶಿಕ ಶಕ್ತಿಯನ್ನು ದುಪ್ಪಟ್ಟುಗೊಳಿಸಿದೆ.








