Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಾನ್ ಕಾರ್ಡ್ ಹೊಸ ಯುಗ: ಹಳೆಯ ಫಾರ್ಮ್‌ಗಳು ರದ್ದು; ಈಗ ಜಾರಿಯಲ್ಲಿವೆ 4 ಹೊಸ ಅರ್ಜಿಗಳು!

08/04/2026 9:18 PM

ಸಾಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು

08/04/2026 9:18 PM

ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ‘ಅಂಬೇಡ್ಕರ್ ಭಾವಚಿತ್ರ’ ಕಡ್ಡಾಯ: ‘KMF’ ಮಹತ್ವದ ಆದೇಶ

08/04/2026 9:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು
KARNATAKA

ಸಾಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0908/04/2026 9:18 PM

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ನಗರದ ಸೌಂದರ್ಯೀಕರಣ ಮತ್ತು ಸಾರ್ವಜನಿಕ ಸೌಲಭ್ಯಗಳಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಿಳಿಸಿದರು.

ಇಂದು ಸಾಗರದ ವಾರ್ಡ್ ನಂಬರ್.16ರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಪುಡ್ ಕೋರ್ಟ್ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮೂರು ಹಂತಗಳಲ್ಲಿ ಹೈಟೆಕ್ ‘ಫುಡ್ ಕೋರ್ಟ್’ ಸ್ಥಾಪನೆ

ಸಾಗರ ನಗರಕ್ಕೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರ ಅನುಕೂಲಕ್ಕಾಗಿ ಮೂರು ಆಯಕಟ್ಟಿನ ಸ್ಥಳಗಳಲ್ಲಿ ಸುಸಜ್ಜಿತ ಫುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ.

  • ಕೈಗಾರಿಕಾ ವಲಯ: ಹೈವೇ ಪಕ್ಕದಲ್ಲಿರುವ ಕೈಗಾರಿಕಾ ವಲಯದಲ್ಲಿ ಮೊದಲು ಫುಡ್ ಕೋರ್ಟ್ ಕಾಮಗಾರಿ ಆರಂಭವಾಗಲಿದ್ದು, ಇಲ್ಲಿನ ಕಾರ್ಮಿಕರಿಗೆ ಅನುಕೂಲವಾಗಲು 20 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ. ಶೀಘ್ರವೇ ಇಲ್ಲಿ ಸುಂದರ ಅಂಗಡಿ ಮಳಿಗೆಗಳು ತಲೆ ಎತ್ತಲಿವೆ.

  • ದ್ವಜಸ್ತಂಭದ ಬಳಿ: ಗಣಪತಿ ಕೆರೆ ಮೇಲ್ಭಾಗದ ದ್ವಜಸ್ತಂಭದ ಬಳಿ 60 ಲಕ್ಷ ರೂ. ವೆಚ್ಚದಲ್ಲಿ ಸುಂದರ ಫುಡ್ ಕೋರ್ಟ್ ಜೊತೆಗೆ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು.

  • ಹಳೆ ಬಸ್ ನಿಲ್ದಾಣ: ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಿರುವ ವಿಶಾಲವಾದ ಫುಡ್ ಕೋರ್ಟ್ ಬರಲಿದೆ. ಇಲ್ಲಿ ಶಾಕಾಹಾರಿ ಮತ್ತು ಮಾಂಸಾಹಾರಿ ವಿಭಾಗಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು.

ಪ್ರವಾಸೋದ್ಯಮ ಮತ್ತು ಸೌಂದರ್ಯೀಕರಣಕ್ಕೆ ಆದ್ಯತೆ

“ಸಿಗಂದೂರು, ಮರ್ಡೇಶ್ವರ, ಕೊಲ್ಲೂರು ಮತ್ತು ಜೋಗ್‌ ಜಲಪಾತಕ್ಕೆ ಹೋಗುವ ಸಾವಿರಾರು ಪ್ರವಾಸಿಗರು ಪ್ರತಿದಿನ ಸಾಗರಕ್ಕೆ ಬರುತ್ತಾರೆ. ನಗರದಲ್ಲಿ ಸ್ವಚ್ಛತೆ ಮತ್ತು ಉತ್ತಮ ಗುಣಮಟ್ಟದ ಆಹಾರದ ವ್ಯವಸ್ಥೆ ಇದ್ದರೆ ಸಾಗರದ ಗೌರವ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹೈಟೆಕ್ ಫುಡ್ ಕೋರ್ಟ್‌ಗಳು ಸಹಕಾರಿಯಾಗಲಿವೆ” ಎಂದು ಅವರು ಅಭಿಪ್ರಾಯಪಟ್ಟರು.

ಮೀನು ಮಾರುಕಟ್ಟೆ ಮತ್ತು ಪಾರ್ಕ್ ಅಭಿವೃದ್ಧಿ

ಸಾಗರದ ಹಳೆಯ ಮೀನು ಮಾರುಕಟ್ಟೆಯನ್ನು ಆಧುನೀಕರಣಗೊಳಿಸಲು ಈಗಾಗಲೇ 1 ಕೋಟಿ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ. “ಈ ಹಿಂದೆ ಸಣ್ಣ ಕಾರಣಗಳಿಗಾಗಿ ಮೀನು ಮಾರುಕಟ್ಟೆ ಕೆಲಸ ನಿಂತುಹೋಗಿತ್ತು. ಈಗ ಮುಖ್ಯಮಂತ್ರಿಗಳ ಬಳಿ ವಿಶೇಷವಾಗಿ ಅನುದಾನ ಮಂಜೂರು ಮಾಡಿಸಿದ್ದೇನೆ. ಮಾರುಕಟ್ಟೆಯ ಒಂದು ಭಾಗವನ್ನು ಮಹಿಳೆಯರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಸುಂದರ ಪಾರ್ಕ್ ಆಗಿ ಪರಿವರ್ತಿಸಲಾಗುವುದು,” ಎಂದರು.

ವಿರೋಧ ಪಕ್ಷದ ಟೀಕೆಗಳಿಗೆ ತಿರುಗೇಟು

ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಹಣವಿಲ್ಲ ಎಂಬ ವಿರೋಧ ಪಕ್ಷಗಳ ಆರೋಪವನ್ನು ಬೇಳೂರು ಅವರು ತಳ್ಳಿಹಾಕಿದರು. “ಗ್ಯಾರಂಟಿ ಯೋಜನೆಗಳು ಬಡವರ ಬದುಕನ್ನು ಬದಲಿಸಿವೆ. ಗ್ಯಾರಂಟಿ ನಡುವೆಯೂ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯಿಲ್ಲ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಸಾಗರದ ಅಭಿವೃದ್ಧಿಗೆ ಬೇಕಾದ ಎಲ್ಲಾ ಯೋಜನೆಗಳನ್ನು ನಾನು ಹಂತ ಹಂತವಾಗಿ ಪೂರೈಸುತ್ತೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಗರ ನಗರಸಭೆಯ ಮಾಜಿ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮಾಜಿ ನಗರಸಭೆ ಸದಸ್ಯರಾದಂತ ಮಧು ಮಾಲತಿ, ಸುರೇಶ್ ಬಾಬು, ಸೈದ್ ಜಾಕೀರ್, ಲಲಿತಮ್ಮ, ರವಿ ಲಿಂಗನಮಕ್ಕಿ, ಚೇತನ್ ರಾಜ್ ಕಣ್ಣೂರು, ದಿನೇಶ್, ಲ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಸೋಮಶೇಖರ ಲಾವಿಗೆರೆ, ನಗರಸಭೆಯ ಪೌರಾಯುಕ್ತ ಹೆಚ್.ಕೆ ನಾಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಸಾಗರ ನಗರ ಯೋಜನಾ ಪ್ರಾಧಿಕಾರದಲ್ಲಿ ಬಾಕಿ ಇದ್ದ 28 ಕಡತಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅನುಮೋದನೆ

ಸಾಗರದಲ್ಲಿ ರೈಲ್ವೆ ಅಂಡರ್ ಪಾಸ್ ಬದಲು ಮೇಲ್ಸೇತುವೆ ನಿರ್ಮಾಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

Share. Facebook Twitter LinkedIn WhatsApp Email

Related Posts

ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ‘ಅಂಬೇಡ್ಕರ್ ಭಾವಚಿತ್ರ’ ಕಡ್ಡಾಯ: ‘KMF’ ಮಹತ್ವದ ಆದೇಶ

08/04/2026 9:08 PM1 Min Read

ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು

08/04/2026 8:33 PM1 Min Read

ಚಂದ್ರದ್ರೋಣ ಪರ್ವತದಲ್ಲಿ ಚಾರಣಕ್ಕೆ ಹೋಗಿದ್ದ ಬಾಲಕಿ ನಾಪತ್ತೆ: ಶೋಧಕ್ಕೆ ಅರಣ್ಯ ಇಲಾಖೆ ಬೆಂಬಲಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

08/04/2026 8:29 PM1 Min Read
Recent News

ಪಾನ್ ಕಾರ್ಡ್ ಹೊಸ ಯುಗ: ಹಳೆಯ ಫಾರ್ಮ್‌ಗಳು ರದ್ದು; ಈಗ ಜಾರಿಯಲ್ಲಿವೆ 4 ಹೊಸ ಅರ್ಜಿಗಳು!

08/04/2026 9:18 PM

ಸಾಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು

08/04/2026 9:18 PM

ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ‘ಅಂಬೇಡ್ಕರ್ ಭಾವಚಿತ್ರ’ ಕಡ್ಡಾಯ: ‘KMF’ ಮಹತ್ವದ ಆದೇಶ

08/04/2026 9:08 PM

SHOCKING: ಮಗುವಿನ ಗಂಟಲಲ್ಲಿದ್ದ 3 ಇಂಚಿನ ಬದುಕಿದ್ದ ಮೀನು ಹೊರತೆಗೆದ ವೈದ್ಯರು, ಸಾವು ಗೆದ್ದ ಪುಟಾಣಿ

08/04/2026 8:47 PM
State News
KARNATAKA

ಸಾಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಶಾಸಕ ಗೋಪಾಲಕೃಷ್ಣ ಬೇಳೂರು

By kannadanewsnow0908/04/2026 9:18 PM KARNATAKA 2 Mins Read

ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ನಗರದ ಸೌಂದರ್ಯೀಕರಣ ಮತ್ತು ಸಾರ್ವಜನಿಕ ಸೌಲಭ್ಯಗಳಿಗಾಗಿ ಕೋಟ್ಯಂತರ ರೂಪಾಯಿ…

ಪ್ರತಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ‘ಅಂಬೇಡ್ಕರ್ ಭಾವಚಿತ್ರ’ ಕಡ್ಡಾಯ: ‘KMF’ ಮಹತ್ವದ ಆದೇಶ

08/04/2026 9:08 PM

ಸಾಗರದ ಕ್ರಿಯೇಟಿವ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅಕ್ರಮ ಮರಳು ದಾಸ್ತಾನು: ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲು

08/04/2026 8:33 PM

ಚಂದ್ರದ್ರೋಣ ಪರ್ವತದಲ್ಲಿ ಚಾರಣಕ್ಕೆ ಹೋಗಿದ್ದ ಬಾಲಕಿ ನಾಪತ್ತೆ: ಶೋಧಕ್ಕೆ ಅರಣ್ಯ ಇಲಾಖೆ ಬೆಂಬಲಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

08/04/2026 8:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.