ನವದೆಹಲಿ:ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ಕಾರ್ಡ್‌ನಲ್ಲಿನ ವೈಯಕ್ತಿಕ ವಿವರಗಳನ್ನು ತಿದ್ದುಪಡಿ ಮಾಡುವ ಕುರಿತು ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಬಳಕೆದಾರರು ಪದೇ ಪದೇ ವಿವರಗಳನ್ನು ಬದಲಾಯಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ಒಬ್ಬ ವ್ಯಕ್ತಿಯು ತನ್ನ ಆಧಾರ್ ಕಾರ್ಡ್‌ನಲ್ಲಿ ಹೆಸರನ್ನು ಕೇವಲ ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶವಿದೆ.
ಜನ್ಮದಿನಾಂಕ (Date of Birth): ಆಧಾರ್‌ನಲ್ಲಿ ಜನ್ಮದಿನಾಂಕವನ್ನು ತಿದ್ದುಪಡಿ ಮಾಡಲು ಕೇವಲ ಒಂದು ಬಾರಿ ಮಾತ್ರ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೆ, ಈ ಹಿಂದೆ ನೀಡಿದ್ದ ದಿನಾಂಕಕ್ಕೂ ಹೊಸ ದಿನಾಂಕಕ್ಕೂ ಗರಿಷ್ಠ 3 ವರ್ಷಗಳಿಗಿಂತ ಹೆಚ್ಚಿನ ವ್ಯತ್ಯಾಸವಿರಬಾರದು.
ಲಿಂಗ ಬದಲಾವಣೆ (Gender): ಲಿಂಗದ ಮಾಹಿತಿಯನ್ನು ಸಹ ಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲು ಅವಕಾಶವಿರುತ್ತದೆ.
ಒಂದು ವೇಳೆ ಈ ಮಿತಿಯ ನಂತರವೂ ಬದಲಾವಣೆ ಅನಿವಾರ್ಯವಾಗಿದ್ದರೆ, ಅಂತಹ ವ್ಯಕ್ತಿಗಳು UIDAI ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ.
ಬದಲಾವಣೆ ಮಾಡುವುದು ಹೇಗೆ?
ಬಳಕೆದಾರರು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ತಿದ್ದುಪಡಿಗಳನ್ನು ಮಾಡಿಕೊಳ್ಳಬಹುದು. ಆದರೆ, ಫೋಟೋ, ಬಯೋಮೆಟ್ರಿಕ್, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನವೀಕರಣಕ್ಕಾಗಿ ಆಧಾರ್ ಕೇಂದ್ರಕ್ಕೇ ಹೋಗುವುದು ಕಡ್ಡಾಯವಾಗಿದೆ.







