ತುಮಕೂರು : ತುಮಕೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರ ಎದುರೇ ದೊಡ್ಡ ಹೈಡ್ರಾಮ ನಡೆದಿದೆ. ಗೃಹ ಸಚಿವರಿಗೆ ಮನವಿ ಮಾಡುವ ವೇಳೆ ಫೇಸ್ಬುಕ್ ಲೈವ್ ಬಂದಿದ್ದಾರೆ. KRS ಪಕ್ಷದ ಮುಖಂಡ ಫೇಸ್ ಬುಕ್ ಲೈವ್ ಬಂದಿದ್ದಾನೆ ಇದನ್ನು ಗೃಹ ಸಚಿವರು ವಿರೋಧಿಸಿದ್ದಾರೆ.
ಆದರೂ ಕೂಡ ಫೇಸ್ಬುಕ್ ನಲ್ಲಿ ಆತ ಲೈವ್ ಹೋಗುತ್ತಿದ್ದ ಕೆಆರ್KRS ಪಕ್ಷದ ಮುಖಂಡ ಶಾಮ್ ಸುಂದರ್ ಮನವಿ ಪತ್ರ ಸಲ್ಲಿಸಲು ಬಂದಿದ್ದರು. ಈ ವೇಳೆ ಗೃಹ ಸಚಿವರು ಗರಂ ಆಗಿದ್ದು, ಪೊಲೀಸರಿಗೆ ಏನಿದೆ ನೋಡಿ ಅಂತ ಹೇಳಿದಾಗ ತಕ್ಷಣ ಪೊಲೀಸರು ಕೆ.ಆರ್ ಪಕ್ಷದ ಮುಖಂಡರ ಶ್ಯಾಮ್ ಸುಂದರನ್ನು ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.








