ಬಳ್ಳಾರಿ: ಜಿಲ್ಲೆಯ ರೈಲ್ವೇ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 40.49 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯ ವಿವರ:
ವಾಸ್ಕೋ ಡ ಗಾಮಾ – ಶಾಲಿಮರ್ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ರೈಲ್ವೇ ಪೊಲೀಸರು ಶ್ವಾನದಳದೊಂದಿಗೆ ರೈಲಿನ ಮೇಲೆ ದಾಳಿ ನಡೆಸಿದರು.
-
ಸೀಟಿನ ಕೆಳಗೆ ಬಚ್ಚಿಟ್ಟಿದ್ದ ಮಾದಕ ದ್ರವ್ಯ: ರೈಲಿನ ಜನರಲ್ ಬೋಗಿಯಲ್ಲಿ ತಪಾಸಣೆ ನಡೆಸಿದಾಗ, ಸೀಟಿನ ಕೆಳಭಾಗದಲ್ಲಿ ಅತ್ಯಂತ ಜಾಗರೂಕತೆಯಿಂದ ಪ್ಯಾಕ್ ಮಾಡಿ ಇಡಲಾಗಿದ್ದ ಗಾಂಜಾ ಪತ್ತೆಯಾಗಿದೆ.
-
ಜಪ್ತಿ ಮಾಡಿದ ವಸ್ತುಗಳು: ಒಟ್ಟು 19 ಬಂಡಲ್‌ಗಳಲ್ಲಿ ತುಂಬಿದ್ದ 20.24 ಲಕ್ಷ ರೂಪಾಯಿ ಮೌಲ್ಯದ 40.49 ಕೆಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳಿಗಾಗಿ ಹುಡುಕಾಟ:
ಪೊಲೀಸರು ದಾಳಿ ನಡೆಸುತ್ತಿದ್ದಂತೆ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ರೈಲ್ವೇ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.
ಅಮೆಜಾನ್ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್: 14,000 ಉದ್ಯೋಗಿಗಳ ವಜಾಕ್ಕೆ ಸಿದ್ಧತೆ? | Amazon layoff








