ಬೆಂಗಳೂರು : ಬೆಂಗಳೂರು ಏರ್ಪೋರ್ಟ್ ನಲ್ಲಿ ದಕ್ಷಿಣ ಕೊರಿಯಾ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿದ್ದ ಆರೋಪಿ ಮೊಹಮ್ಮದ್ ಅಫಾನ್ ಅಹಮದ್ ಅರ್ಜಿಯನ್ನು ಹೈಕೋರ್ಟ್ ಇದೀಗ ವಜಾಗೊಳಿಸಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ. ಶೋಧನೆಯ ನೆಪದಲ್ಲಿ ಅಸಭ್ಯವಾಗಿ ಸ್ಪರ್ಶಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪುರುಷರ ಶೌಚಾಲಯಕ್ಕೆ ಕರೆದೊಯ್ದು ಆರೋಪಿ ದೌರ್ಜನ್ಯ ಎಸಗಿದ್ದಾನೆ ಎಂದು ದಕ್ಷಿಣ ಕೊರಿಯಾ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಳು.
ದಕ್ಷಿಣ ಕೊರಿಯಾ ಗೆ ತೆರಳಲು ಇಮ್ಮಿಗ್ರೇಶನ್ ತಪಾಸಣೆ ಮುಗಿದ ಬಳಿಕ ಆರೋಪಿ ಈ ಕೃತ್ಯ ಎಸಗಿದ್ದಾನೆ. ಈ ಬಗ್ಗೆ ಹೈಕೋರ್ಟ್ ಗರಂ ಆಗಿದೆ. ಮಹಿಳೆಯೊಂದಿಗೆ ಹೀಗೆ ನಡೆದುಕೊಂಡವನನ್ನು ಹಾಗೆ ಬಿಟ್ಟುಬಿಡಬೇಕ? ವಿದೇಶಿ ಮಹಿಳೆ ದೂರಿನಲ್ಲಿ ಈತನ ಕೃತ್ಯವನ್ನು ವಿವರಿಸಿದ್ದಾರೆ. ಪ್ರಕರಣ ರದ್ದು ಸಾಧ್ಯವಿಲ್ಲ ಎಂದು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.








