ಹುಬ್ಬಳ್ಳಿ : ಲವ್ ಜಿಹಾದ್ ಆರೋಪ ಪ್ರಕರಣ ಸಂಬಂಧ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯುವತಿ ತಾಯಿ ಸಮೀರ್, ಸಹೋದರಿ ತೈಸೀನ್ ಸೇರಿದಂತೆ 6 ಜನರ ವಿರುದ್ಧ ದೂರು ನೀದ್ದಿದ್ದಾರೆ. ಇದೀಗ ಆರೋಪಿ ಸಮೀರ್ ಮುಲ್ಲಾ ಮತ್ತೊಂದು ದೂರು ದಾಖಲಿಸಿದ್ದಾನೆ.
ಹೌದು ಆರೋಪಿ ಸಮೀರ್ ಮುಲ್ಲಾ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮತ್ತೊಂದು ದೂರು ದಾಖಲಿಸಿರುವ ಆರೋಪಿ ಜಿಮ್ ಟ್ರೈನರ್ ಸಮೀರ್ ಮುಲ್ಲಾ ತನ್ನನ್ನು 60 ಜನರು ಬಂದು ಅಪಹರಿಸಿಕೊಂಡು ಹೋಗಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಇದೀಗ ಪೊಲೀಸರು ಈ ಬಗ್ಗೆಯೂ ತನಿಖೆ ಮಾಡಲು ಮುಂದಾಗಿದ್ದಾರೆ.
ನಿನ್ನೆ ಮುಂಜಾನೆ ಸಮೀರ್ ಮನೆಗೆ ಹೋಗಿ ಆತನನ್ನು ಎತ್ತಿಕೊಂಡು ಬಂದಿದ್ದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಎಂದು ಹೇಳಲಾಗುತ್ತಿದೆ. ಅವರು ಸಮೀರ್ ನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಮೀರ್ ಲವ್ ಜಿಹಾದ್ ಮಾಡಿದ್ದಾನೆ ಎಂದು ಆರೋಪಿಸಿ ಅವರನ್ನು ಥಳಿಸಲಾಗಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಯುವತಿ ಮತ್ತು ಅವಳ ತಾಯಿ ವಿದ್ಯಾನಗರ ಠಾಣೆಗೆ ಎರಡು ದೂರು ನೀಡಿದ್ದಾರೆ. ಸಮೀರ್ ಕುಟುಂಬದವರು ಅಶೋಕ ನಗರ ಠಾಣೆಗೆ ಒಂದು ದೂರು ನೀಡಿದ್ದಾರೆ. ಒಟ್ಟು ಮೂರು ದೂರು ದಾಖಲಾಗಿವೆ. ಎಲ್ಲಾ ದೂರುಗಳ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ ಎಂದು ಹುಬ್ಬಳ್ಳಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.








