ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸ್ಫೋಟಕವಾದ ತಿರುವು ಸಿಕ್ಕಿದ್ದು ಯುವತಿಗೆ, ಆರೋಪಿ ಸಮೀರ್ ಮುಲ್ಲಾ ಗರ್ಭಪಾತ ಮಾಡಿಸಿರುವ ವಿಷಯ ಬಹಿರಂಗವಾಗಿದೆ. ಹಾಗಾಗಿ ಪೊಲೀಸರು ಈ ಬಗ್ಗೆ ವೈದಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಹೌದು ಆರೋಪಿ ಸಮೀರ್ ಮತ್ತು ಯುವತಿಯನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಹುಬ್ಬಳ್ಳಿಯ ವಿದ್ಯಾನಗರ ಠಾಣೆ ಪೊಲೀಸ್ರಿಂದ ವಿಚಾರಣೆಗೆ ಸಿದ್ಧತೆ ನಡೆದಿದೆ. ಸಂತ್ರಸ್ತ ಯುವತಿಯ ಮೇಲೆ ಸಮೀರ್ ಮುಲ್ಲಾ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ ಈ ಹಿನ್ನೆಲೆ ಸಮೀರ್ ಮುಲ್ಲಾನ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುತಿಯನ್ನು ಸಮೀರ್ ಮಾಡೆಲ್ ಮಾಡುತ್ತೇನೆ ಎಂದು ಹೇಳಿದ್ದ. ಹಾಗಾಗಿ ನಿತ್ಯ ಜಿಮ್ ಗೆ ಬಾ ಎಂದು ಯುವತಿಗೆ ಹೇಳಿದ್ದ. ಸಮೀರ್ ಮಾತು ಕೇಳಿ ಯುವತಿ ಮಾಡೆಲ್ ಆಗುವ ಕನಸುಕಂಡಿದ್ದಳು. ಇದೇ ಕಾರಣಕ್ಕೆ ಸಮೀರ್ ಮತ್ತು ಯುವತಿ ನಡುವೆ ಆತ್ಮೀಯ ಬೆಳೆದಿತ್ತು. ಅದನ್ನೇ ದುರ್ಬಳಕೆ ಮಾಡಿಕೊಂಡ ಅಂತ ಯುವತಿಯ ಪೋಷಕರು ಆರೋಪಿಸುತ್ತಿದ್ದಾರೆ.








