ಬೆಂಗಳೂರು : ಉಪಚುನಾವಣೆ ಹೊತ್ತಲ್ಲೆ ಗ್ಯಾರಂಟಿ ಹಣ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ಗೆ ಗೌತಮ್ ಕುಮಾರ್ ಜೈನ್ ಎನ್ನುವರು ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನಲ್ಲಿ ಈ ಒಂದು ಅರ್ಜಿಯ ವಿಚಾರಣೆ ನಡೆಯಿತು. ಹೈಕೋರ್ಟಿಗೆ ಸರ್ಕಾರದ ಪರ ವಕೀಲ ಎಜಿ ಶಕಿರಣಶೆಟ್ಟಿ ಮಾಹಿತಿ ನೀಡಿದ್ದಾರೆ.
ಫೆಬ್ರುವರಿ ವರೆಗಿನ ಗೃಹಲಕ್ಷ್ಮಿ ಹಣವನ್ನು ಈಗಾಗಲೇ ನೀಡಲಾಗಿದೆ. ಉಳಿದ ಹಣ ಯಾವಾಗ ಬಿಡುಗಡೆ ಎಂದು ಈಗ ಹೇಳುವಲಾಗುವುದಿಲ್ಲ. ಉಚಿತ ವಿದ್ಯುತ್ ಮಹಿಳೆಯರಿಗೆ ಬಸ್ ಸೌಲಭ್ಯ ನೀಡಲಾಗಿದೆ. ರಾಜ್ಯದ ಎಲ್ಲಾ ಫಲಾನುಭವಿಗಳಿಗೂ ಈ ಸೌಲಭ್ಯ ನೀಡಲಾಗಿದೆ. ಉಪಚುನಾವಣೆ ಕಾರಣ ಅದನ್ನು ತಡೆಹಿಡಿಯಲು ಅರ್ಜಿದಾರರು ಕೇಳುತ್ತಾರೆ ಎಂದು ಗೌತಮ್ ಕುಮಾರ್ ಜೈನ್ ರಿಟ್ ಅರ್ಜಿಗೆ ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಹೈಕೋರ್ಟ್ ಜಡ್ಜ್ ಸರ್ಕಾರದ ನೀತಿಯಂತೆ ಸೌಲಭ್ಯ ನೀಡಲಾಗುತ್ತಿದೆ ಎಂದು ಹೈಕೋರ್ಟ್ ಇದೆ ವೇಳೆ ತಿಳಿಸಿತು. ಅನ್ನ ಭಾಗ್ಯದ ಹಣ ಆರು ತಿಂಗಳಿನಿಂದ ನಡಿಲ್ಲವೆಂದು ಇದೇ ವೇಳೆ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಅರ್ಜಿ ವಿಚಾರಣೆಯನ್ನು ಏಪ್ರಿಲ್ 15ಕ್ಕೆ ಹೈಕೋರ್ಟ್ ಮಂದೂಡಿತು.








