ಮಂಡ್ಯ : ಇಂದು ಮಂಡ್ಯದಲ್ಲಿ ವಿಶ್ವ ಹಿಂದೂ ಪರಿಷತ್ ನಿಂದ ಶೋಭಯಾತ್ರೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆ ನಗರದಲ್ಲಿ ಹಾಕಿದ್ದ ಕೇಸರಿ ಬಾವುಟ ಹಾಗು ಬಂಟಿಂಗ್ಸ್ ತೆರವು ಮಾಡಲಾಯಿತು.
ಅನುಮತಿ ಪಡೆಯದ ಹಿನ್ನೆಲೆ, ನಗರಸಭೆ ಸಿಬ್ಬಂದಿಗಳು ಕೇಸರಿ ಬಾವುಟ, ಬಂಟಿಂಗ್ಸ್ ತೆರವು ಮಾಡಿದರು.ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಕೇಸರಿ ಬಾವುಟ ತೆರವುಗೋಳಿಸಿದ್ದಾರೆ. ಇಂದು ಸಂಜೆ ಮಂಡ್ಯದಲ್ಲಿ ಬೃಹತ್ ಶೋಭಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಾವುಟ ತೆರವುಗೋಳಿಸಿದ್ದಕ್ಕೆ ಹಿಂದೂ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.








