Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ ಡಿವೈಡರ್ ಡಿಕ್ಕಿ ಹೊಡೆದ ಬಸ್ : ಅದೃಷ್ಟವಶಾತ್ 30ಕ್ಕೂ ಹೆಚ್ಚು ಪ್ರಯಾಣಿಕರು ಪಾರು!

02/04/2026 9:54 AM

SHOCKING : ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ : ತಾಯಿ ಕಾಣೆಯಾಗಿದ್ದಕ್ಕೆ ಮಗ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ.!

02/04/2026 9:53 AM

ಕೈಗಾರಿಕೆಗಳಿಗೆ ಕೇಂದ್ರದ ಬಂಪರ್ ಗಿಫ್ಟ್: ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕ ಸಂಪೂರ್ಣ ರದ್ದು; ಜೂನ್ 30 ರವರೆಗೆ ಹೊಸ ನಿಯಮ ಜಾರಿ!

02/04/2026 9:51 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ : ತಾಯಿ ಕಾಣೆಯಾಗಿದ್ದಕ್ಕೆ ಮಗ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ.!
KARNATAKA

SHOCKING : ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ : ತಾಯಿ ಕಾಣೆಯಾಗಿದ್ದಕ್ಕೆ ಮಗ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ.!

By kannadanewsnow5702/04/2026 9:53 AM

ಮಂಡ್ಯ : ನಿತ್ಯದ ಕುಡಿತದ ಗಲಾಟೆಯಿಂದ ಬೇಸತ್ತು ತಾಯಿ ಮನೆ ಬಿಟ್ಟರೆ, ಅಮ್ಮ ಕಾಣೆಯಾದಳೆಂಬ ಆತಂಕದಲ್ಲಿ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಮಹದೇವಮ್ಮ (75) ಹಾಗೂ ಅವರ ಪುತ್ರ ಸುಭಾಷ್ (42) ಮೃತಪಟ್ಟ ದುರ್ದೈವಿಗಳು. ಒಂದು ಸುಂದರ ಕುಟುಂಬ ಮದ್ಯಪಾನದ ವ್ಯಸನದಿಂದಾಗಿ ಹೇಗೆ ಛಿದ್ರವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಘಟನೆಯ ಹಿನ್ನೆಲೆ:
ಮೃತ ಸುಭಾಷ್ ಕಳೆದ ಕೆಲವು ಸಮಯದಿಂದ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ಪ್ರತಿದಿನ ಕುಡಿದು ಬಂದು ಮನೆಯಲ್ಲಿ ತಾಯಿ ಮಹದೇವಮ್ಮ ಅವರೊಂದಿಗೆ ಜಗಳವಾಡುತ್ತಿದ್ದನು. ಮಗನ ಈ ವರ್ತನೆಯಿಂದ ತೀವ್ರವಾಗಿ ಮನನೊಂದಿದ್ದ ಮಹದೇವಮ್ಮ, ಕಳೆದ 15 ದಿನಗಳ ಹಿಂದೆ ಯಾರಿಗೂ ತಿಳಿಸದೆ ಮನೆಯಿಂದ ನಾಪತ್ತೆಯಾಗಿದ್ದರು.

ಆತಂಕದಲ್ಲಿ ಮಗನ ಆತ್ಮಹತ್ಯೆ:
ತಾಯಿ ನಾಪತ್ತೆಯಾದ ದಿನದಿಂದ ಸುಭಾಷ್ ಆತಂಕಕ್ಕೊಳಗಾಗಿದ್ದನು. ಎಲ್ಲೆಡೆ ಹುಡುಕಾಡಿದರೂ ತಾಯಿ ಪತ್ತೆಯಾಗದಿದ್ದಾಗ, ತಾನು ಮಾಡಿದ ತಪ್ಪಿನ ಅರಿವಾಗಿ ಅಥವಾ ಭಯಗೊಂಡು ಕಳೆದ ಮಂಗಳವಾರ ಸುಭಾಷ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು.

ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ತಾಯಿಯ ಶವ:
ಮಗನ ಅಂತ್ಯಕ್ರಿಯೆ ನಡೆದ ಬೆನ್ನಲ್ಲೇ ಇಂದು ಗ್ರಾಮದ ಸಮೀಪದ ಕಬ್ಬಿನ ಗದ್ದೆಯೊಂದರಲ್ಲಿ ತಾಯಿ ಮಹದೇವಮ್ಮ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆ ಬಿಟ್ಟು ಹೋಗಿದ್ದ ವೃದ್ಧೆ ಅನಾಥವಾಗಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಕಣ್ಣೀರು ತರಿಸಿದೆ.

ಪೊಲೀಸ್ ತನಿಖೆ:
ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ತಾಯಿ-ಮಗನ ಈ ಸಾವು ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ.

mother's body found in decomposed state! SHOCKING: Heartbreaking incident in the state: Son commits suicide after mother goes missing
Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ ಡಿವೈಡರ್ ಡಿಕ್ಕಿ ಹೊಡೆದ ಬಸ್ : ಅದೃಷ್ಟವಶಾತ್ 30ಕ್ಕೂ ಹೆಚ್ಚು ಪ್ರಯಾಣಿಕರು ಪಾರು!

02/04/2026 9:54 AM1 Min Read

ಸಾಯಿಬಾಬಾರ ಅಂತಿಮ ದಿನಗಳು ಹೇಗಿತ್ತು ಗೊತ್ತಾ..!! ಅವರ ಚರಿತ್ರೆ ಎಂತದ್ದು ಗೊತ್ತಾ

02/04/2026 9:40 AM6 Mins Read

Weather update : ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ : ಈ 10 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

02/04/2026 9:35 AM1 Min Read
Recent News

BREAKING : ಬೆಂಗಳೂರಲ್ಲಿ ಡಿವೈಡರ್ ಡಿಕ್ಕಿ ಹೊಡೆದ ಬಸ್ : ಅದೃಷ್ಟವಶಾತ್ 30ಕ್ಕೂ ಹೆಚ್ಚು ಪ್ರಯಾಣಿಕರು ಪಾರು!

02/04/2026 9:54 AM

SHOCKING : ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ : ತಾಯಿ ಕಾಣೆಯಾಗಿದ್ದಕ್ಕೆ ಮಗ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ.!

02/04/2026 9:53 AM

ಕೈಗಾರಿಕೆಗಳಿಗೆ ಕೇಂದ್ರದ ಬಂಪರ್ ಗಿಫ್ಟ್: ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕ ಸಂಪೂರ್ಣ ರದ್ದು; ಜೂನ್ 30 ರವರೆಗೆ ಹೊಸ ನಿಯಮ ಜಾರಿ!

02/04/2026 9:51 AM

ಸಾಯಿಬಾಬಾರ ಅಂತಿಮ ದಿನಗಳು ಹೇಗಿತ್ತು ಗೊತ್ತಾ..!! ಅವರ ಚರಿತ್ರೆ ಎಂತದ್ದು ಗೊತ್ತಾ

02/04/2026 9:40 AM
State News
KARNATAKA

BREAKING : ಬೆಂಗಳೂರಲ್ಲಿ ಡಿವೈಡರ್ ಡಿಕ್ಕಿ ಹೊಡೆದ ಬಸ್ : ಅದೃಷ್ಟವಶಾತ್ 30ಕ್ಕೂ ಹೆಚ್ಚು ಪ್ರಯಾಣಿಕರು ಪಾರು!

By kannadanewsnow0502/04/2026 9:54 AM KARNATAKA 1 Min Read

ಬೆಂಗಳೂರು : ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ವೇಗವಾಗಿ ಬಂದ ಆಂಧ್ರ ಬಸ್ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ…

SHOCKING : ರಾಜ್ಯದಲ್ಲಿ ಹೃದಯ ವಿದ್ರಾವಕ ಘಟನೆ : ತಾಯಿ ಕಾಣೆಯಾಗಿದ್ದಕ್ಕೆ ಮಗ ಆತ್ಮಹತ್ಯೆ, ಕೊಳೆತ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ.!

02/04/2026 9:53 AM

ಸಾಯಿಬಾಬಾರ ಅಂತಿಮ ದಿನಗಳು ಹೇಗಿತ್ತು ಗೊತ್ತಾ..!! ಅವರ ಚರಿತ್ರೆ ಎಂತದ್ದು ಗೊತ್ತಾ

02/04/2026 9:40 AM

Weather update : ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ : ಈ 10 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಣೆ

02/04/2026 9:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.