ಬೆಂಗಳೂರು : ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ವೇಗವಾಗಿ ಬಂದ ಆಂಧ್ರ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್ ನುಜ್ಜು ಗುಜ್ಜಾಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಸ್ ಅಧೋನಿಯಿಂದ ಅನಂತಪುರದ ಮೂಲಕ ಬೆಂಗಳೂರಿಗೆ ಬರುತ್ತಿತ್ತು ಎನ್ನಲಾಗ್ತಿದೆ. ಅಪಘಾತದ ರಭಸಕ್ಕೆ ಬಸ್ ಮುಂಭಾಗದ ಚಕ್ರ ಹಾಗೂ ಇಂಜಿನ್ ಕಿತ್ತು ಬಂದಿದೆ. ಬಸ್ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ರು ಎನ್ನಲಾಗ್ತಿದ್ದು. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೂ ಗಾಬರಿ ಗಾಯಗಳಾಗಿಲ್ಲ ಎಂದು ವರದಿ ಆಗಿದೆ.








