ಮುಂಬೈ:ಪಶ್ಚಿಮ ಏಷ್ಯಾದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧವು ಜಾಗತಿಕ ಸಮುದ್ರ ಮಾರ್ಗಗಳ ಮೇಲೆ ಭೀಕರ ಪರಿಣಾಮ ಬೀರಿದೆ. ಈ ಕುರಿತು ಮುಂಬೈನಲ್ಲಿ ನಡೆದ ನೌಕಾಸೇನಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾರತೀಯ ನೌಕಾಸೇನಾ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ, ಹೋರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಯುದ್ಧ ಆರಂಭವಾದಾಗಿನಿಂದ ಹೋರ್ಮುಜ್ ಜಲಸಂಧಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದುವರೆಗೆ 20ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳ (Merchant Vessels) ಮೇಲೆ ದಾಳಿ ನಡೆದಿದೆ.
ಸಂಚಾರ ಸ್ಥಗಿತ: ಸಂಘರ್ಷದ ಭೀತಿಯಿಂದಾಗಿ ಸುಮಾರು 1,900 ಹಡಗುಗಳು ಸಮುದ್ರದ ಮಧ್ಯದಲ್ಲೇ ಸಿಲುಕಿಕೊಂಡಿವೆ ಅಥವಾ ಸಂಚಾರ ಸ್ಥಗಿತಗೊಳಿಸಿವೆ.
ಯುದ್ಧಕ್ಕೆ ಮೊದಲು ಈ ಮಾರ್ಗದಲ್ಲಿ ಪ್ರತಿದಿನ ಸರಾಸರಿ 130 ಹಡಗುಗಳು ಸಂಚರಿಸುತ್ತಿದ್ದವು. ಆದರೆ ಈಗ ಈ ಸಂಖ್ಯೆ ಕೇವಲ 6 ರಿಂದ 7ಕ್ಕೆ ಕುಸಿದಿದೆ. ಇದು ಜಾಗತಿಕ ಸರಕು ಸಾಗಣೆಯ ಮೇಲೆ ದೊಡ್ಡ ಹೊಡೆತ ನೀಡಿದೆ.ವಿಶ್ವದ ಶೇ. 20ರಷ್ಟು ತೈಲ ಪೂರೈಕೆಯಾಗುವ ಈ ಮಾರ್ಗವು ಬಂದ್ ಆಗಿರುವುದರಿಂದ ಭಾರತ ಸೇರಿದಂತೆ ಹಲವು ದೇಶಗಳ ಇಂಧನ ಭದ್ರತೆಗೆ ಆತಂಕ ಎದುರಾಗಿದೆ.
ಸಂಘರ್ಷ ಪೀಡಿತ ಪ್ರದೇಶದಿಂದ ಹೊರಬರುವ ಭಾರತೀಯ ತೈಲ ನೌಕೆಗಳು ಮತ್ತು ಗ್ಯಾಸ್ ಟ್ಯಾಂಕರ್‌ಗಳಿಗೆ ಭಾರತೀಯ ನೌಕಾಸೇನೆಯು ಪೂರ್ಣ ರಕ್ಷಣೆ ಮತ್ತು ಎಸ್‌ಕಾರ್ಟ್ ಸೇವೆ ನೀಡುತ್ತಿದೆ ಎಂದು ಅಡ್ಮಿರಲ್ ತಿಳಿಸಿದ್ದಾರೆ.








