ಹಾವೇರಿ : ಹಾವೇರಿಯಲ್ಲಿ ಬಸ್ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಎರಡು ವರ್ಷದ ಮಗು ಹಜರತ್ ಅಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ.
ಹಾವೇರಿ ಬಸ್ ನಿಲ್ದಾಣದಲ್ಲಿ ಇಂದು ಈ ಒಂದು ಭೀಕರ ಅಪಘಾತ ಸಂಭವಿಸಿತ್ತು ಬಸ್ ಗಾಗಿ ಕಾಯುತ್ತಿದವರ ಮೇಲೆ ಸರ್ಕಾರಿ ಬಸ್ ಏಕಾಏಕಿ ಬಂದು ನಿಯಂತ್ರಣ ಕಳೆದುಕೊಂಡು ಹರಿದಿದೆ ಈ ವೇಳೆ ಎರಡು ವರ್ಷದ ಹಜರತ್ ಅಲಿಗೆ ಗಂಭೀರವಾದ ಗಾಯಗಳಾಗಿತ್ತು. ಇನ್ನು ಉಳಿದ ಮೂವರು ಪ್ರಯಾಣಿಕರಾದ ವಾಸುದೇವ ಹರ್ಷ ಹಾಗೂ ಕಾವ್ಯಂಜಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.








