ತುಮಕೂರು : ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಡಾ. ಶಿವಕುಮಾರ್ ಶ್ರೀಗಳ ಜನ್ಮದಿನೊತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಿದ್ದಾರೆ. ಇದೇ ವೇಳೆ ಮಠದ ಕಾರ್ಯಕ್ರಮಕ್ಕೆ ಎಂದು ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.
ಕಾರ್ಯಕ್ರಮಕ್ಕೆ ಬಂದಿದ್ದ ನಟರಾಜು (60) ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಎದೆನೋವು ಕಾಣಿಸಿಕೊಂಡು ಮಠದಲ್ಲೇ ಕುಸಿದುಬಿದ್ದು ದುರ್ಮರಣ ಹೊಂದಿದ್ದಾರೆ. ಮೃತ ನಟರಾಜು ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕಿನ ತಾಯೂರು ನಿವಾಸಿ ಎಂದು ತಿಳಿದುಬಂದಿದೆ. ನಿನ್ನೆ ಸ್ನೇಹಿತರ ಜೊತೆಗೆ ಸಿದ್ದಗಂಗಾ ಮಠಕ್ಕೆ ಬಂದಿದ್ದ ನಟರಾಜು ಶೌಚಾಲಯಕ್ಕೆ ಹೋಗಿ ಬರುವಾಗಿ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ. ಅಲ್ಲದೇ ಮಠದ ಹಳೆ ವಿದ್ಯಾರ್ಥಿಯಾದ ನಟರಾಜು ಪ್ರತಿವರ್ಷದಂತೆ ಈ ವರ್ಷವು ಬಂದಿದ್ದ. ಕೆಲ ದಿನಗಳ ಹಿಂದೆ ಅಷ್ಟೆ ಹಾರ್ಟ್ ಸರ್ಜರಿ ಮಾಡಿಸಿಕೊಂಡಿದ್ದ.








