ಬೆಂಗಳೂರು : ಗಲ್ಫ್ ಯುದ್ಧದ ಪರಿಣಾಮ ಸಿಲಿಂಡರ್, ಪೆಟ್ರೋಲ್, ಡಿಸೇಲ್ ಅಭಾವ ಇದ್ದು ಇದರ ಮಧ್ಯ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ಹೌದು ಆರ್ಥಿಕ ಸಂಕಷ್ಟದಿಂದ ಹೊರಬರುವ ಉದ್ದೇಶದೊಂದಿಗೆ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ನೀರು ಬಳಕೆ ಶುಲ್ಕವನ್ನು ಶೇ.3ರಷ್ಟು ಹೆಚ್ಚಿಸಲಿದೆ. ಲಮಂಡಳಿ ಪ್ರತಿ ವರ್ಷದಂತೆ ಆರ್ಥಿಕ ಸಮತೋಲನವನ್ನ ಸರಿದೂಗಿಸಲು ಶೇ.3 ರಷ್ಟು ನೀರಿನ ಶುಲ್ಕ ಹೆಚ್ಚಿಸಿದೆ.
ಈ ತಿಂಗಳ ಬಿಲ್‌ನಿಂದಲೇ ದರ ಅನ್ವಯವಾಗಲಿದೆ. ಪರಿಣಾಮ ಏಪ್ರಿಲ್ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮಾಸಿಕ ಸರಾಸರಿ 20 ರಿಂದ 30 ರೂ. ಹೆಚ್ಚುವರಿ ನೀರಿನ ಬಿಲ್ ಬರುವ ಸಾಧ್ಯತೆಗಳಿವೆ. ಪರಿಷ್ಕೃತ ದರ ಹಿನ್ನೆಲೆ ಗೃಹ ಬಳಕೆದಾರರಿಗೆ ಸ್ಲ್ಯಾಬ್ ಗಳ ಆಧಾರದಡಿ ಸುಮಾರು ಪ್ರತಿ ಲೀಟರ್ ಗೆ 0.15 ಪೈಸೆಯಿಂದ 1 ಪೈಸೆವರೆಗೆ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್‌ಗೆ 1.90 ಪೈಸೆ ಏರಿಕೆ ಆಗಲಿದೆ.
ದರ ಏರಿಕೆಯ ಮುಖ್ಯಾಂಶಗಳು:
-
ವಾರ್ಷಿಕ ಏರಿಕೆ: ಇನ್ಮುಂದೆ ಪ್ರತಿ ವರ್ಷ ಏಪ್ರಿಲ್ 1ರಂದು ನೀರಿನ ದರವು ಶೇ. 3 ರಷ್ಟು ಏರಿಕೆಯಾಗಲಿದೆ.
-
ಗೃಹ ಬಳಕೆದಾರರ ಮೇಲೆ ಪರಿಣಾಮ: ಸಾಮಾನ್ಯ ಕುಟುಂಬಗಳಿಗೆ ತಿಂಗಳಿಗೆ ಅಂದಾಜು 20 ರಿಂದ 30 ರೂಪಾಯಿ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯಿದೆ.
-
ವಾಣಿಜ್ಯ ಬಳಕೆದಾರರು: ಇವರಿಗೆ ಸುಮಾರು 50 ರಿಂದ 60 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಏರಿಕೆಯಾಗಬಹುದು.
-
ಕಾರಣ: ಕಾವೇರಿ ನೀರನ್ನು ಪಂಪ್ ಮಾಡಲು ತಗಲುವ ವಿದ್ಯುತ್ ವೆಚ್ಚ ಮತ್ತು ಮಂಡಳಿಯ ನಿರ್ವಹಣಾ ವೆಚ್ಚದ ಹೆಚ್ಚಳವನ್ನು ಸರಿದೂಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
| ನೀರಿನ ಬಳಕೆ (ಲೀಟರ್‌ಗಳಲ್ಲಿ) | ಅಂದಾಜು ಹೆಚ್ಚಳ (ಪ್ರತಿ ಲೀಟರ್‌ಗೆ) |
| 8,000 ಲೀಟರ್ ವರೆಗೆ | 0.15 ಪೈಸೆ |
| 8,000 – 25,000 ಲೀಟರ್ | 0.30 ಪೈಸೆ |
| 25,000 – 50,000 ಲೀಟರ್ | 0.80 ಪೈಸೆ |
| 50,000 ಲೀಟರ್‌ಗಿಂತ ಹೆಚ್ಚು | 1 ಪೈಸೆ |








