ನವದೆಹಲಿ: 2025-26ನೇ ಸಾಲಿನ ಹಣಕಾಸು ವರ್ಷವು ಇಂದು (ಮಾರ್ಚ್ 31) ಮುಕ್ತಾಯಗೊಳ್ಳುತ್ತಿದೆ. ಸಾರ್ವಜನಿಕ ಭವಿಷ್ಯ ನಿಧಿ (PPF) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಅಡಿಯಲ್ಲಿ ಖಾತೆ ಹೊಂದಿರುವವರು ತಮ್ಮ ಖಾತೆಯನ್ನು ಸಕ್ರಿಯವಾಗಿಡಲು ಮತ್ತು ತೆರಿಗೆ ಸೌಲಭ್ಯ ಪಡೆಯಲು ಇಂದೇ ಕನಿಷ್ಠ ಮೊತ್ತವನ್ನು ಜಮಾ ಮಾಡುವುದು ಕಡ್ಡಾಯವಾಗಿದೆ.
ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಲ್ಲಿ ಖಾತೆಯನ್ನು ಸಕ್ರಿಯವಾಗಿಡಲು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 500 ರೂಪಾಯಿ ಜಮಾ ಮಾಡಲೇಬೇಕು. ಇಂದು ರಾತ್ರಿಯೊಳಗೆ ಈ ಮೊತ್ತವನ್ನು ಜಮಾ ಮಾಡದಿದ್ದರೆ ನಿಮ್ಮ ಖಾತೆಯು ‘ಸ್ಥಗಿತ’ (Discontinued)ಗೊಳ್ಳುತ್ತದೆ.
ಒಂದು ವೇಳೆ ಇಂದು ಕನಿಷ್ಠ ಮೊತ್ತವನ್ನು ಪಾವತಿಸದಿದ್ದರೆ, ಮುಂದಿನ ವರ್ಷ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲು ಪ್ರತಿ ವರ್ಷಕ್ಕೆ 50 ರೂಪಾಯಿ ದಂಡ ತೆರಬೇಕಾಗುತ್ತದೆ.
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಸೌಲಭ್ಯ ಪಡೆಯಲು ಇಂದೇ ಹೂಡಿಕೆ ಮಾಡುವುದು ಕೊನೆಯ ಅವಕಾಶವಾಗಿದೆ.ಪಿಪಿಎಫ್‌ನಲ್ಲಿ ಬಡ್ಡಿಯನ್ನು ವಾರ್ಷಿಕವಾಗಿ ಲೆಕ್ಕ ಹಾಕಲಾಗುತ್ತದೆ. ಕನಿಷ್ಠ ಮೊತ್ತ ಜಮಾ ಮಾಡದಿದ್ದರೆ ಆ ವರ್ಷಕ್ಕೆ ಸಿಗಬೇಕಾದ ಬಡ್ಡಿ ಸೌಲಭ್ಯದಿಂದ ನೀವು ವಂಚಿತರಾಗುತ್ತೀರಿ.








