ಶಿವಮೊಗ್ಗ: ಬಿಜೆಪಿಯವರು ನಡೆಸುತ್ತಿರುವ ಕರೂರು ಪಾದಯಾತ್ರೆಯು ಕೇವಲ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವೇ ಹೊರತು, ಇದರಲ್ಲಿ ಜನಸಾಮಾನ್ಯರ ಹಿತಾಸಕ್ತಿ ಇಲ್ಲ ಎಂದು ಕರೂರು ಹೋಬಳಿ ಕಾಂಗ್ರೆಸ್ ಘಟಕದ ಮುಖಂಡ ಹಾಗೂ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಕರೂರು ಟೀಕಿಸಿದೆ.
ಈ ಕುರಿತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಿಜೆಪಿಯಿಂದ ಹಮ್ಮಿಕೊಂಡಿರುವಂತ ಕರೂರು ಪಾದಯಾತ್ರೆ ವಿರುದ್ಧ ವಾಗ್ಧಾಳಿ ನಡೆಸಿದರು.
ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:
-
ರಾಜಕೀಯ ಪ್ರೇರಿತ ಪಾದಯಾತ್ರೆ: ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ಪಾದಯಾತ್ರೆಯನ್ನು ಸಂಘಟಿಸಿದೆ. ಇದು ಜನರ ಸಮಸ್ಯೆಗಳಿಗಾಗಿ ಮಾಡುತ್ತಿರುವ ಹೋರಾಟವಲ್ಲ ಎಂದು ಆರೋಪಿಸಿದ್ದಾರೆ.
-
ವೈದ್ಯಾಧಿಕಾರಿಗಳ ರಾಜೀನಾಮೆ ವಿಚಾರ: ತುಮರಿ ಆಸ್ಪತ್ರೆಯಲ್ಲಿದ್ದ ಮಹಿಳಾ ವೈದ್ಯಾಧಿಕಾರಿ ರಾಜೀನಾಮೆ ನೀಡಲು ಸ್ಥಳೀಯ ಬಿಜೆಪಿ ಮುಖಂಡರ ಗುಂಡಾವರ್ತನೆಯೇ ಕಾರಣ. ವೈದ್ಯರ ಮೇಲೆ ಒತ್ತಡ ಹಾಕಿ, ಭಯದ ವಾತಾವರಣ ನಿರ್ಮಿಸಿದ್ದರಿಂದ ಅವರು ಕೆಲಸ ಬಿಟ್ಟಿದ್ದಾರೆ ಎಂದು ದೂರಿದೆ..
-
ಆರೋಗ್ಯ ಸೇವೆಯಲ್ಲಿ ಸುಧಾರಣೆ: ವೈದ್ಯರ ಕೊರತೆಯನ್ನು ನೀಗಿಸಲು ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಹೊಸದಾಗಿ ನರ್ಸ್‌ಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದ್ದು, ಸದ್ಯದಲ್ಲೇ ಪೂರ್ಣ ಪ್ರಮಾಣದ ವೈದ್ಯರ ನೇಮಕಾತಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
-
ಹಿಂದಿನ ಸರ್ಕಾರದ ವೈಫಲ್ಯ: ಹರತಾಳು ಹಾಲಪ್ಪನವರು ಶಾಸಕರಾಗಿದ್ದ ಅವಧಿಯಲ್ಲಿ 108 ಆಂಬುಲೆನ್ಸ್ ಸೇವೆ ತಿಂಗಳುಗಟ್ಟಲೆ ಇರಲಿಲ್ಲ. ಆಗ ಅಪಘಾತಕ್ಕೀಡಾದ ಕಾರ್ಮಿಕರಿಗೆ ಕನಿಷ್ಠ ಮಾನವೀಯ ಸ್ಪಂದನೆಯೂ ಸಿಗಲಿಲ್ಲ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಸುಸಜ್ಜಿತ ಆರೋಗ್ಯ ಸೇವೆ ನೀಡಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
-
ಅಂಬಾರಗುಡ್ಡ ಡಿನೋಟಿಫಿಕೇಶನ್: ಅಂಬಾರಗುಡ್ಡ ಭಾಗದ 4 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗಿದ್ದು, ಅಲ್ಲಿನ ಕುಟುಂಬಗಳ ಹಿತದೃಷ್ಟಿಯಿಂದ ಅವುಗಳನ್ನು ಡಿನೋಟಿಫೈ ಮಾಡುವ ಕೆಲಸ ಕೇಂದ್ರ ಸರ್ಕಾರದಿಂದ ಆಗಬೇಕು. ಈ ಬಗ್ಗೆ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಸಲಹೆ ಮಾಡಿದರು.
ಒಟ್ಟಾರೆಯಾಗಿ, ಬಿಜೆಪಿಯ ಪಾದಯಾತ್ರೆಯು ಕೇವಲ ರಾಜಕೀಯ ನಾಟಕವಾಗಿದ್ದು, ಜನರು ಇದಕ್ಕೆ ಮರುಳಾಗಬಾರದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಕರೂರು ಮನವಿ ಮಾಡಿದರು.
ಈ ಸುದ್ದಿಗೋಷ್ಠಿಯ ವೇಳೆಯಲ್ಲಿ ಮಾಜಿ ಕೆಡಿಪಿ ಸದಸ್ಯ ಕಬ್ದೂರು ದೇವರಾಜ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹರೀಶ್ ಗಂಟೆ, ತುಮರಿ ಘಟಕದ ಅಧ್ಯಕ್ಷ ಓಂಕಾರ್ ಜೈನ್, ಮುಖಂಡರಾದಂತ ಗಣೇಶ್ ಜಾಕಿ, ಸಂತೋಷ್ ಕುಮಾರ್ ಶೆಟ್ಟಿ, ಅಣ್ಣಪ್ಪ ತುಮರಿ, ಕೃಷ್ಣ ಭಂಡಾರಿ, ವಿಜಯ್ ಅಡಗಳಲೆ, ಭರತ್ ಕುಮಾರ್ ವಿ.ಪಿ, ಶಶಿ ಜೈನ್ ಹಾಗೂ ಜಯಂತ್ ಬೊಬ್ಬಿಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಗರದ ‘ಮೀನು ಮಾರುಕಟ್ಟೆ’ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದಿಂದ 129.90 ಲಕ್ಷ ಬಿಡುಗಡೆ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 50 ಲಕ್ಷ ಮೌಲ್ಯದ ನಕಲಿ ಸಿಗರೇಟ್ ಜಪ್ತಿ: ಐವರು ಆರೋಪಿಗಳು ಅರೆಸ್ಟ್








