ಬೆಂಗಳೂರು : ಐಪಿಎಲ್ ಟಿಕೆಟ್ ಗಾಗಿ ವಿಧಾನಸಭೆಯಲ್ಲಿ ಶಾಸಕರ ಬೇಡಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಶಾಸಕರಿಗೆ 3 ಟಿಕೆಟ್ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಬೆಂಗಳೂರಿನ ಸದಾಶಿವನಾಗರದ ನಿವಾಸದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
KSCA, DNA, RCB ಪದಾಧಿಕಾರಿಗಳ ಜೊತೆಗೆ ಸಭೆಯ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ಐಪಿಎಲ್ ಟಿಕೆಟ್ ಸಂಬಂಧ ಸ್ಪೀಕರ್ ಯುಟಿ ಖಾದರ್ ಜೊತೆಗೆ ಮಾತನಾಡಿದ್ದೆ ಅಂತರಾಷ್ಟ್ರೀಯ ಪಂದ್ಯ ಇದ್ದಾಗ ಶಾಸಕರಿಗೆ ಎರಡು ಟಿಕೆಟ್ ಕೊಡುತ್ತಾರೆ. ಇನ್ನು ಹೆಚ್ಚು ಟಿಕೆಟ್ ಬೇಕಾದರೆ ಬೇರೆ ರೀತಿ ಮನವಿ ಮಾಡಬೇಕು. ಇಲ್ಲದಿದ್ದರೆ ಹಣ ನೀಡಿ ಟಿಕೆಟ್ ಖರೀದಿ ಮಾಡಿ ಎಂದು ಹೇಳಿದ್ದಾರೆ.
ಬೇರೆ ಕಡೆ ಎಲ್ಲಿ ಕ್ರೀಡಾಂಗಣ ಕಟ್ಟಿದರೆ ಸೂಕ್ತ ಎಂದು ಚಿಂತಿಸುತ್ತಿದ್ದೇವೆ. ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಹಾಸನ ಸಾಮರ್ಥ್ಯ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಯಾರಿಗೆ ಏನು ಅನುಮತಿ ಕೊಡಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
Held a meeting with representatives from the Karnataka State Cricket Association, including President Shri Venkatesh Prasad, DNA Entertainment Networks MD Shri Venkat, Chief Communication Officer Shri Vinay Mruthyunjay, and Royal Challengers Bengaluru CEO Shri Rajesh Menon at my… pic.twitter.com/gzDxL9akUi
— DK Shivakumar (@DKShivakumar) March 30, 2026








