ಯಾದಗಿರಿ : ದೇಶದ ವಿವಿಧ ಭಾಗಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ ಎಂದು ಗ್ರಾಹಕರು ಚಿಂತಿಸುತ್ತಿದ್ದರೆ, ಇತ್ತ ಬೆಳೆ ಬೆಳೆದ ರೈತರಿಗೆ ಮಾತ್ರ ‘ಯುದ್ಧ’ದ ಭೀತಿ ಆವರಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಈರುಳ್ಳಿಗೆ ಈಗ ‘ಬ್ರೇಕ್’ ಬಿದ್ದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತ ಕಂಡು ರೈತರು ಕಂಗಾಲಾಗಿದ್ದಾರೆ.
ಹೌದು ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಈರುಳ್ಳಿಗೆ ಬ್ರೇಕ್ ಹಾಕಲಾಗಿದೆ ಇಲ್ಲದೆ ರೈತರು ಇದೀಗ ಕಂಗಾಲಾಗಿದ್ದಾರೆ ಯುದ್ಧದಿಂದಾಗಿ ಬೆಲೆ ಸಂಪೂರ್ಣವಾಗಿ ಕುಸಿತ ಆಗಿದೆ ಒಂದು ತಿಂಗಳ ಹಿಂದೆ ಕೇವಲ 300 ಇಂದ 400 ರೂಪಾಯಿಗೆ ಮಾತ್ರ ಖರೀದಿ ಆಗುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಫ್ತು ಕುಸಿತಕ್ಕೆ ಪ್ರಮುಖ ಕಾರಣಗಳೇನು?
ಸಾರಿಗೆ ಅಸ್ತವ್ಯಸ್ತ: ಯುದ್ಧದ ಹಿನ್ನೆಲೆಯಲ್ಲಿ ಕೆಂಪು ಸಮುದ್ರದ (Red Sea) ಮಾರ್ಗವಾಗಿ ನಡೆಯುತ್ತಿದ್ದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದ ಸರಕು ಸಾಗಣೆ ವೆಚ್ಚ ವಿಪರೀತ ಹೆಚ್ಚಾಗಿದ್ದು, ರಫ್ತುದಾರರು ಹಿಂದೆ ಸರಿಯುತ್ತಿದ್ದಾರೆ.
ಬೇಡಿಕೆಯಲ್ಲಿ ಇಳಿಕೆ: ಗಲ್ಫ್ ರಾಷ್ಟ್ರಗಳ ಆರ್ಥಿಕತೆ ಮತ್ತು ಮಾರುಕಟ್ಟೆಯ ಮೇಲಾಗಿರುವ ಯುದ್ಧದ ಪರಿಣಾಮದಿಂದಾಗಿ, ಭಾರತದಿಂದ ಪ್ರತಿವರ್ಷ ಹೋಗುತ್ತಿದ್ದ ಈರುಳ್ಳಿಯ ಬೇಡಿಕೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಬಂದರುಗಳಲ್ಲಿ ಬಾಕಿ ಉಳಿದ ಸರಕು: ರಫ್ತು ಮಾಡಲು ಸಿದ್ಧವಿದ್ದ ಟನ್ ಗಟ್ಟಲೆ ಈರುಳ್ಳಿ ಈಗ ಬಂದರುಗಳಲ್ಲೇ ಉಳಿಯುವಂತಾಗಿದ್ದು, ಕೊಳೆಯುವ ಭೀತಿ ಎದುರಾಗಿದೆ.








