ಬೆಂಗಳೂರು : ಆರೋಪಿಗಳಿಗೆ ವಾಟ್ಸಪ್ ಮೂಲಕ ನೋಟಿಸ್ ಜಾರಿಯ ನಿಯಮವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಬಂಧನದಿಂದ ಬಿಡುಗಡೆ ಕೋರಿದ ವಂಚನೆ ಆರೋಪಿ ಅರ್ಜಿಯನ್ನು ಇದೇ ಸಂದರ್ಭದಲ್ಲಿ ವಜಾಗೊಳಿಸಿ ಆದೇಶ ಹೊರಡಿಸಿದೆ.
ಹೈ ಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಒಂದು ಆದೇಶ ಹೊರಡಿಸಿದ್ದು, ಬಿಎನ್ಎಸ್ ಸೆಕ್ಷನ್ 35 ಪೊಲೀಸರಿಗೆ ಎಲೆಕ್ಟ್ರಾನಿಕ್ ನೋಟಿಸ್ ಜಾರಿಗೆ ಅವಕಾಶ ಇಲ್ಲ ಪೊಲೀಸ್ ವಿಚಾರಣೆಯ ನೋಟಿಸ್ ಖುದ್ದಾಗಿ ಜಾರಿಗೊಳಿಸಬೇಕು ನೋಟಿಸ್ ಜಾರಿಗೆ ಪೊಲೀಸರು ಯತ್ನಿಸಿದರು ಆರೋಪಿ ಸಿಕ್ಕಿಲ್ಲ.
40 ದಿನಗಳ ಕಾಲ ಪೊಲೀಸ್ ನೋಟಿಸ್ ಜಾರಿ ತಪ್ಪಿಸಿಕೊಂಡಿದ್ದಾನೆ. ಎಲೆಕ್ಟ್ರಾನಿಕ್ ನೋಟಿಸ್ ಜಾರಿಗೊಳಿಸಬಹುದು ಎಂಬ ವಾದ ಒಪ್ಪಲಾಗದು. ಬಂಧನದ ಕಾರಣಗಳನ್ನು ನೀಡಿ ಆರೋಪಿ ಬಂಧಿಸಲಾಗಿದೆ. ಹೀಗಾಗಿ ವಂಚನೆ ಬಿಡುಗಡೆ ಕೋರಿದ ಅರ್ಜಿಯನ್ನು ಹೈಕೋರ್ಟ್ ಮಜಾ ಗೊಳಿಸಿದೆ.








