ಚಿಕ್ಕಬಳ್ಳಾಪುರ : ಚಲಿಸುತ್ತಿದ್ದ ಟೆಂಪೋನಿಂದ ಬಿದ್ದು ಕಾರ್ಮಿಕ ಮಹಿಳೆ ಒಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಿಂಡಿಪಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅನಸೂಯಮ್ಮ (25) ಎಂದು ತಿಳಿದುಬಂದಿದೆ. ಮಲ್ಲಿಕಾ, ಗೀತಾ, ಅನಿತಾ ಎಂಬ ಮಹಿಳೆಯರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








