ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಸ್ಟೇಷನ್ ಒಂದಕ್ಕೆ ಬಾಗ್ಮನೆ ಹೆಸರು ಇಡಲು ನಿರ್ಧರಿಸಿದ್ದು, ಈ ಹಿನ್ನೆಲೆ ಇದೀಗ BMRCL ಬಾಗ್ಮನೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೌದು ಬೆಂಗಳೂರಿನ ಔಟರ್ ರಿಂಗ್ ರೋಡ್ ಸ್ಟೇಷನ್ ಒಂದಕ್ಕೆ ಬಾಗ್ಮನೆ ಕಂಪನಿ ಹೆಸರು ಇಡಲು BMRCL ನಿರ್ಧರಿಸಿದೆ. 20 ವರ್ಷಗಳಿಗೆ 40 ಕೋಟಿ ಹಣ ನೀಡಿ ಕಂಪನಿಯಿಂದ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು ಮೆಟ್ರೋ ರೈಲು ನಿಯಮಿತ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. DRDO ಸ್ಪೋರ್ಟ್ಸ್ ಕಾಂಪ್ಲೇಕ್ಸ್ ಸ್ಟೇಷನ್ ಗೆ ಹೆಸರಿಡಲು ಒಪ್ಪಂದ ಮಾಡಿಕೊಂಡಿದೆ. ಸಿಲ್ಕ್ ಬೋರ್ಡ್ ಟು ಕೆ.ಆರ್ ಪುರಂ ಮಾರ್ಗದಲ್ಲಿ ಬರುವ ನಿಲ್ದಾಣಕ್ಕೆ ಬಾಗ್ಮನೆ ಕಂಪನಿ ಜೊತೆ BMRCL ಒಪ್ಪಂದಕ್ಕೆ ಸಹಿ ಹಾಕಿದೆ. BMRCL ವ್ಯವಸ್ಥಾಪಕ ನಿರ್ದೇಶಕ ಡಾ.ಜೆ ರವಿಶಂಕರ್ ಹಾಗು ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನ ಆದಿತ್ಯ ಬಾಗ್ಮನೆ ಭಾಗಿಯಾಗಿದ್ದರು. ಒಪ್ಪಂದದ 40 ಕೋಟಿ ಹಣದ ಪೈಕಿ ಈಗಾಗಲೇ 20ಕೋಟಿ ಪಾವತಿ ಮಾಡಲಾಗಿದೆ. ಸಿಲ್ಕ್ ಬೋರ್ಡ್ ಟು ಕೆ.ಆರ್.ಪುರಂ 19.75 ಕಿಮೀ ಉದ್ದದ ಏರ್ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. ಡಿಸೇಂಬರ್ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೇ.








