ಬೀದರ್ : ಗಲ್ಫ್ ಯುದ್ಧದ ಬಿಸಿ ಇದೀಗ ರೈತರಿಗೂ ತಟ್ಟಿದೆ. ಅದರಲ್ಲೂ ಚಿಯಾ ಬೆಳೆಗಾರರಿಗೆ ಯುದ್ಧದ ಬಿಸಿ ತಟ್ಟಿದೆ. ಚಿಯಾ ಬೀಜ ಮಾರಾಟದಲ್ಲಿ ಸಂಪೂರ್ಣ ಕುಸಿತವಾಗಿದ್ದು, ರೈತರು ಕಂಗಾಲು ಆಗಿದ್ದಾರೆ. ಬೀದರ್ ನಲ್ಲಿ ಅನ್ನದಾತರು ಅಳಲು ತೋಡಿಕೊಂಡಿದ್ದು, 22 ಸಾವಿರಕ್ಕೆ ಮಾರಾಟವಾಗುತ್ತಿದ್ದ ಕ್ವಿಂಟಲ್ ಚಿಯಾ ಬಿಜ 12,000ಕ್ಕೆ ಕುಸಿದಿದೆ ಅಂತ ರೈತರು ಹೇಳುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಿಗೆ ಅತಿ ಹೆಚ್ಚು ಚಿಯಾ ಸೀಡ್ಸ್ ರಫ್ತು ಆಗುತ್ತಿತ್ತು.
ಇತ್ತ ಇನ್ನೊಂದು ಕಡೆ ಮುಂಗಾರು ಬಿತ್ತನಿಗೆ ಯುದ್ಧದ ಬಿಸಿ ತಟ್ಟುವ ಆತಂಕ ಶುರುವಾಗಿದೆ ಯುದ್ಧದಿಂದ ರಸಗೊಬ್ಬರ ಕಚ್ಚಾ ವಸ್ತು ಆಮದಿಗೆ ಅಡ್ಡಿ ಆಗುತ್ತಿದೆ ಕೊಳ್ಳಿ ರಾಷ್ಟ್ರದಿಂದಲೇ ಕಚಾವಸ್ತುಗಳು ಹೆಚ್ಚಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಗೊಬ್ಬರ ತಯಾರಿಕೆಗೆ ಪೆಟ್ಟು ಬೀಳುತ್ತಿದೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಆದರೆ ಬಿತ್ತನೆ ಕಾರ್ಯ ಮಾಡುವ ವೇಳೆ ಸಮಸ್ಯೆ ಆಗುತ್ತೆ ಅಂತ ಅಂಗಡಿ ಮಾಲೀಕರು ಹೇಳುತ್ತಿದ್ದಾರೆ.
ಮುಖ್ಯಾಂಶಗಳು:
ಹಳೆಯ ಬೆಲೆ: ₹22,000 (ಪ್ರತಿ ಕ್ವಿಂಟಲ್‌ಗೆ)
ಪ್ರಸ್ತುತ ಬೆಲೆ: ₹12,000 (ಪ್ರತಿ ಕ್ವಿಂಟಲ್‌ಗೆ)
ಕಾರಣ: ಗಲ್ಫ್ ಯುದ್ಧದ ಹಿನ್ನೆಲೆ, ರಫ್ತು ವಹಿವಾಟಿನಲ್ಲಿ ಕುಸಿತ.








