ಬೆಂಗಳೂರು : ಹಿಂದಿ ಪರೀಕ್ಷೆ ಕಡ್ಡಾಯವಲ್ಲ ಎಂಬ ಸರ್ಕಾರದ ನಿರ್ಧಾರದ ವಿಚಾರಕ್ಕೆ ಸಂಬಂಧಪಟ್ಟಂತೆ ಭಾಷೆ ಕಲಿಯುವಂತದ್ದು ಅದು ಹೇರಿಕೆ ಅಲ್ಲ. ಯಾರ ಮಾತು ಕೇಳಿ ಹಿಂದಿ ಭಾಷೆ ತೆಗೆದಿದ್ದೀರಿ ಎಂದು ಸರ್ಕಾರಕ್ಕೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ.
ಮೊದಮೊದಲು ದೆಹಲಿಗೆ ಹೋದಾಗ ನನ್ನ ಭಾಷೆ ಕೇಳಿ ನಗುತ್ತಿದ್ದರು. ಯಾವ ಭಾಷೆ ಮಾತನಾಡುವುದು ನೀವು ಅಂತ ನಗುತ್ತಿದ್ದರು. ಹಿಂದಿ ಕಲಿಯುವುದರಿಂದ ಸಮಸ್ಯೆ ಏನಾಗುತ್ತದೆ? ರಾಜ್ಯ ಸರ್ಕಾರ ತ್ರೀ ಭಾಷಾ ನೀತಿಯ ಬಗ್ಗೆ ಗೊಂದಲ ಸೃಷ್ಟಿಸುತ್ತಿದೆ. ನಾವು ತ್ರೀ ಭಾಷಾ ಸೂತ್ರ ಕಲಿತಿದ್ದೇವೆ. ನಮಗೇನು ಸಮಸ್ಯೆ ಆಗಿಲ್ಲ. ಎಲ್ಲಾ ಭಾಷೆಗಳನ್ನು ಎಲ್ಲರೂ ಕಲಿಯಬೇಕು. ರಾಜ್ಯ ಸರ್ಕಾರ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ.
ವರ್ಷಪೂರ್ತಿ ವಿದ್ಯಾರ್ಥಿಗಳು ಹಿಂದಿ ಕಲಿತಿರುತ್ತಾರೆ. ಆದರೆ ಸರ್ಕಾರ ಪರೀಕ್ಷೆ ಶುರುವಾದಾಗ ಹಿಂದಿ ಕಡ್ಡಾಯ ಅಲ್ಲ ಎಂದಿದೆ. ಒಂದು ವರ್ಷ ಕಲಿತ ಮೇಲೆ ಪರೀಕ್ಷೆ ಬೇಡ ಅಂದರೆ ಹೇಗೆ? ಮಕ್ಕಳು ನಮಗೆ ಹಿಂದಿ ಬೇಡ ಅಂದಿದ್ರ? ಪೋಷಕರು ಬೇಡ ಅಂದಿದ್ರ? ಯಾರ ಮಾತು ಕೇಳಿ ಹಿಂದಿ ತೆಗೆದ್ರಿ? ರಾಜ್ಯದ ಶಿಕ್ಷಣ ಸಚಿವರಿಗೆ ಶಿಕ್ಷಣವೇ ಇಲ್ಲ. ಸಿಎಂ ಅವರಿಗೆ ಏನಾಗಿತ್ತು? ಯಾಕೆ ಇಂತಹ ತೀರ್ಮಾನ ಎಂದು ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.








