ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು ಕಾರು ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ವಸಂತನಗರದ ವಕ್ಫ್ ಬೋರ್ಡ್ ಎದರು ತಡರಾತ್ರಿ ಘಟನೆ ಸಂಭವಿಸಿದೆ.
ಮೃತ ಬೈಕ್ ಸವಾರರನ್ನು ಜುಬೇರ್ ಅಹಮದ್ (42) ಅಬ್ದುಲ್ ಮುನೀರ್ ಪಾಷಾ (16) ಎಂದು ತಿಳಿದು ಬಂದಿದೆ. ಒನ್ ವೇ ನಲ್ಲಿ ಬಂದು ಬೈಕ್ಗೆ ಕಾರು ಚಾಲಕ ಡಿಕ್ಕಿ ಹೊಡೆದಿದ್ದಾನೆ. ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಇದ್ದ ಇಬ್ಬರೂ ಸಾವನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಾಲಕ ಅಯ್ಯಪ್ಪ ಮಧ್ಯ ಸೇವಿಸಿ ಕಾರು ಚಲಾಯಿಸಿರುವುದು ಪತ್ತೆಯಾಗಿದ್ದು, ವೊಗ್ಸ್ ವ್ಯಾಗನ್ ಕಾರನ್ನು ಜಪ್ತಿ ಮಾಡಿಕೊಟ್ಟಿದ್ದು ಚಾಲಕ ಅಯ್ಯಪ್ಪನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.








