ಮೈಸೂರು : ಪೊಲೀಸ್ ಎಂದರೆ ಶಿಸ್ತು ಧೈರ್ಯ ಮತ್ತು ಪ್ರಾಮಾಣಿಕತೆ ಇರುವ ಕೆಲಸ ಎಂದು ಪಿ ಎಸ್ ಐ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಧ್ಯರಾತ್ರಿ 12 ಗಂಟೆಗೆ ಮಹಿಳೆಯರು ನಿರ್ಭಯವಾಗಿ ಹೋರಾಡಬೇಕು ಅಂತ ಸಮಾಜ ನಿರ್ಮಾಣ ಆಗಬೇಕು ಎಂಬುವುದು ಮಹಾತ್ಮ ಗಾಂಧೀಜಿ ಆಶಯ. ಎಷ್ಟೇ ಕಷ್ಟವಾದರೂ ಸಹ ಪೊಲೀಸರು ನ್ಯಾಯ ಎತ್ತಿ ಹಿಡಿಯಬೇಕು. ಬಲಾಡ್ಯರ ಅಧಿಕಾರ ಇರಬಾರದು. ಬಲಾಡ್ಯರ ಕೈಯಲ್ಲಿ ಅಧಿಕಾರ ಇದ್ದರೆ ಸಮಾ ಸಮಾಜ ನಿರ್ಮಾಣ ಅಸಾಧ್ಯ. ಪೊಲೀಸರು ಶ್ರೀಮಂತರ ಆಸೆಗೆ ಆಮಿಷಗಳಿಗೆ ಒಳಗಾಗಬಾರದು ಶ್ರೀಮಂತರು ಪೊಲೀಸರನ್ನು ದುರುಪಯೋಗಪಡಿಸಿಕೊಡಲು ಯತ್ನಿಸುತ್ತಾರೆ ಎಂದು ಪಿಎಸ್ಐ ಗಳ ನಿರ್ಗಮನ ಪದ ಸಂಚಲನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.








