ಗುವಾಹಟಿ: ಅಸ್ಸಾಂನ ಧೇಮಾಜಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರದ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭೇಟಿಯಾಗಲು ಮುಗಿಬಿದ್ದ ಮಹಿಳಾ ಬೆಂಬಲಿಗರ ಗುಂಪಿನಲ್ಲಿದ್ದ ಮಹಿಳೆಯೊಬ್ಬರು, ಸಿಎಂ ಅವರನ್ನು ಹತ್ತಿರಕ್ಕೆ ಎಳೆದುಕೊಂಡು ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಪರಿಶುದ್ಧ ಪ್ರೀತಿಯ ಪ್ರತಿಫಲ: ಸಿಎಂ ಪ್ರತಿಕ್ರಿಯೆ
ಈ ಘಟನೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿದ್ದಂತೆ, ಹಿಮಂತ ಬಿಸ್ವಾ ಶರ್ಮಾ ಅವರು ಇದನ್ನು ತಮ್ಮ ಜನಪ್ರಿಯತೆಯ ಸಂಕೇತವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾಯಂದಿರು, ಮಕ್ಕಳು ಮತ್ತು ಹಿರಿಯರು ನನ್ನ ಮೇಲೆ ಅಪಾರ ಪ್ರೀತಿ ತೋರುತ್ತಾರೆ. ಆ ಮಹಿಳೆ ಮುತ್ತಿಕ್ಕಿದ ಘಟನೆಯಲ್ಲಿ ಪರಿಶುದ್ಧತೆ, ಏಕತೆ ಮತ್ತು ಪ್ರೀತಿಯಿದೆ. ಇದು ಕೇವಲ ಒಂದು ಕ್ಷಣದಲ್ಲಿ ಬಂದಿದ್ದಲ್ಲ, ಕಳೆದ 25 ವರ್ಷಗಳ ನನ್ನ ‘ತಪಸ್ಸು’ ಅಥವಾ ಸೇವೆಯ ಫಲವಾಗಿದೆ,” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ಪ್ರವಾಹವಿರಲಿ, ಕೋವಿಡ್ ಸಂಕಷ್ಟವಿರಲಿ ಅಥವಾ ಮಕ್ಕಳ ಕಲ್ಯಾಣದ ಕೆಲಸಗಳಿರಲಿ, ನಾನು ಯಾವಾಗಲೂ ಮುಂಚೂಣಿಯಲ್ಲಿ ನಿಂತಿದ್ದೇನೆ. ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನ ಪ್ರೀತಿ ತೋರಿಸುತ್ತಾರೆ. ಕಾಂಗ್ರೆಸ್‌ನವರಿಗೆ ಯಾಕೆ ಜನ ಮುತ್ತು ಕೊಡುತ್ತಿಲ್ಲ ಎಂದು ಅವರು ಕೇಳಿದರೆ ಅದಕ್ಕೆ ನಾನು ಜವಾಬ್ದಾರನಲ್ಲ” ಎಂದು ವಿರೋಧ ಪಕ್ಷಗಳಿಗೆ ವ್ಯಂಗ್ಯವಾಡಿದರು.
ಮಹಿಳಾ ಮತದಾರರ ಮೇಲೆ ಕಣ್ಣು
ಅಸ್ಸಾಂನಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗೆ ಸಮನಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಮಹಿಳಾ ಕೇಂದ್ರಿತ ಯೋಜನೆಗಳ ಮೂಲಕ ಅವರ ಮನಗೆಲ್ಲಲು ಪ್ರಯತ್ನಿಸುತ್ತಿದೆ:
ಅರುಣೋದೋಯ್ ಯೋಜನೆ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ನೇರ ನಗದು ವರ್ಗಾವಣೆ.
ಲಖ್ಪತಿ ಬೈಡಿಯೋ ಯೋಜನೆ: ಸುಮಾರು 40 ಲಕ್ಷ ಗ್ರಾಮೀಣ ಮಹಿಳೆಯರನ್ನು ಉದ್ಯಮಿಗಳನ್ನಾಗಿ ಮಾಡಲು ತಲಾ ₹35,000 ಅನುದಾನ ನೀಡುವ ಗುರಿ .
Assam: A lady in Dhemaji pulled and kissed CM @himantabiswa on his cheeks.
Meanwhile, if you notice, a little girl towards the end of the video, with folded hands greeting the Chief Minister.
Difference of age, understanding and upbringing. ❤️pic.twitter.com/kUUM2PydZx
— aboyob bhuyan (@aboyobbhuyan) March 28, 2026








