ಬೆಂಗಳೂರು : ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಯನ್ನು ಉಗ್ರ ಎಂದು ಕರೆದ ಆರೋಪದ ಹಿನ್ನೆಲೆಯಲ್ಲಿ ಈಗ ಸಸ್ಪೆಂಡ್ ಆದ ಪ್ರೊಫೆಸರ್ ಮುರುಳಿದರ ದೇಶಪಾಂಡೆ ವಿರುದ್ಧ ಗಿರಿನಗರ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದ ಒಂದು ಪೋಸ್ಟನ್ನು ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ ಧಾರ್ಮಿಕ ಭಾವನೆಗೆ ದಕ್ಕೆ ಮಾಡುವ ಆರೋಪದ ಅಡಿ ಲೆಸ್ ದಾಖಲಾಗಿದೆ. ಬಿ ಎನ್ ಎಸ್ ಸೆಕ್ಷನ್ 299 352ರ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ಹಿನ್ನೆಲೆ?
ನಗರದ ಪ್ರತಿಷ್ಠಿತ PES ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ‘ಭಯೋತ್ಪಾದಕ’ (Terrorist) ಎಂದು ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಪ್ರೊಫೆಸರ್ ಅವರನ್ನು ಅಮಾನತುಗೊಳಿಸಿದೆ.
ವಿದ್ಯಾರ್ಥಿ ಅಫ್ಫಾನ್ ತರಗತಿಯ ನಡುವೆ ಹೊರಗೆ ಹೋಗಲು ಅನುಮತಿ ಕೇಳಿದ್ದನು. ಇದರಿಂದ ಆಕ್ರೋಶಗೊಂಡ ಪ್ರೊಫೆಸರ್ ಡಾ. ಮುರಳೀಧರ್ ದೇಶಪಾಂಡೆ, ವಿದ್ಯಾರ್ಥಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಆತನ ಧರ್ಮವನ್ನು ಗುರಿಯಾಗಿಸಿ ‘ಭಯೋತ್ಪಾದಕ’ ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರೊಫೆಸರ್ ವಿದ್ಯಾರ್ಥಿಗೆ “ನಿನಗೆ ನಾಚಿಕೆಯಾಗುವುದಿಲ್ಲವೇ?” ಎಂದು ಬೈಯುತ್ತಿರುವುದು ಕೇಳಿಬಂದಿದೆ. ವಿದ್ಯಾರ್ಥಿಯನ್ನು “ನರಕಕ್ಕೆ ಹೋಗು” ಎಂದು ಶಪಿಸಿರುವುದಲ್ಲದೆ, ಜಾಗತಿಕ ಸಂಘರ್ಷಗಳಾದ ‘ಇರಾನ್ ಯುದ್ಧ’ಕ್ಕೂ ಆತನೇ ಜವಾಬ್ದಾರ ಎಂಬಂತೆ ಮಾತನಾಡಿದ್ದಾರೆ ಎನ್ನಲಾಗಿದೆ. ತರಗತಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ ಈ ಘಟನೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಅದು ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Controversy erupts in #Bengaluru. @NSUIKarnataka lodged a police complaint against an adjunct professor for allegedly calling a student a terrorist when class was in session. Dr Muralidhar Deshpande was suspended by PES University on VC's orders. @BlrCityPolice @seemantsingh96 pic.twitter.com/QoxafVEDeI
— Prajwal D'Souza (@prajwaldza) March 28, 2026







