Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕ್ಲಾಸ್ ರೂಂ ಅಲ್ಲಿ ವಿದ್ಯಾರ್ಥಿಯನ್ನು ಉಗ್ರ ಎಂದು ಕರೆದ ಆರೋಪ : ಪ್ರೊಫೆಸರ್ ವಿರುದ್ಧ ‘FIR’ ದಾಖಲು

28/03/2026 3:44 PM

‘ಪ್ರತಿ 2 ನಿಮಿಷಕ್ಕೊಂದು ವಿಮಾನ ಹಾರಾಟ ‘ ; ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

28/03/2026 3:41 PM

ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆರ್.ಮೋಹನ್ ಕುಮಾರ್ ಅವಿರೋಧ ಆಯ್ಕೆ

28/03/2026 3:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಮಾಜವಾದಿ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿಗೆ ಪುರಸ್ಕಾರ : ನನಗೆ IPL ಟಿಕೆಟ್ ಬೇಡವೇ ಬೇಡ ಎಂದ ಸುರೇಶ್ ಕುಮಾರ್!
KARNATAKA

ಸಮಾಜವಾದಿ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿಗೆ ಪುರಸ್ಕಾರ : ನನಗೆ IPL ಟಿಕೆಟ್ ಬೇಡವೇ ಬೇಡ ಎಂದ ಸುರೇಶ್ ಕುಮಾರ್!

By kannadanewsnow0528/03/2026 3:30 PM

ಬೆಂಗಳೂರು : ಐಪಿಎಲ್ ನಡೆಯುವಾಗ ಶಾಸಕರಿಗೆ ಕೇವಲ ಒಂದು ಟಿಕೆಟ್ ಮಾತ್ರ ನೀಡಲಾಗುತ್ತದೆ ನಮಗೆ ಒಂದು ಟಿಕೆಟ್ ನಲ್ಲಿ ನಾವು ಕುಟುಂಬದವರನ್ನು ಹೇಗೆ ಕಳುಹಿಸಬೇಕು ಎಂದು ಸದನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಬಿಜೆಪಿ ನಾಯಕರು ಕೂಡ ಹೆಚ್ಚುವರಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದರು. ಅದರ ಬೆನ್ನಲ್ಲೆ ಕೆಎಸ್ಸಿಎ ಎರಡು ಟಿಕೆಟ್ ನೀಡುವುದಾಗಿ ಯೋಚನೆ ಮಾಡಿತು.

ಆದರೆ ಇದೀಗ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಸ್ಪೀಕರ್‌ ಯುಟಿ ಖಾದರ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸಮಾಜವಾದಿ ಎಂದು ಹೇಳಿಕೊಳ್ಳುವ ಸರ್ಕಾರದ ಆಡಳಿತದಲ್ಲಿ ಈ ವಿಐಪಿ ಸಂಸ್ಕೃತಿಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿಯಾಗಿದೆ. ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ದಿಢೀರನೆ ಚಿನ್ನಸ್ವಾಮಿ ಸ್ಟೇಡಿಯಂನ ಐಪಿಎಲ್ ಪಂದ್ಯ, ಶಾಸಕರಿಗೆ ಟಿಕೆಟ್ ಹಂಚಿಕೆ ಹಾಗೂ ಶಾಸಕರ ಮರ್ಯಾದೆಯ ಕುರಿತು ಚರ್ಚೆಗಳು ಪ್ರಾರಂಭವಾದದ್ದು ತಮಗೆ ತಿಳಿದೇ ಇದೆ.

ಜನಸಾಮಾನ್ಯರ ಅದೆಷ್ಟೋ ಗಂಭೀರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ವರ್ಷಾನುಗಟ್ಟಲೆ ಪರಿಹಾರ ಸಿಗುವುದಿಲ್ಲ. ಆದರೆ ಶಾಸಕರ ಸೌಲಭ್ಯ, ಟಿಕೆಟ್ ವಿಚಾರ ಬಂದಾಗ 24 ಗಂಟೆಯೊಳಗೆ ಸ್ಪಂದಿಸುವ ಉತ್ಸುಕತೆಯನ್ನು ಸರ್ಕಾರ ತೋರಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯ ಹಾಗೂ ಜನಪ್ರತಿನಿಧಿಗಳ ಬಗ್ಗೆ ತಿರಸ್ಕಾರ ಮೂಡುವಂತೆ ಮಾಡಿದೆ.

ಮಾಧ್ಯಮಗಳ ವರದಿ ಪ್ರಕಾರ ಶಾಸಕರಿಗೆ ತಲಾ ಎರಡು ಹಾಗೂ ಮುಂದಿನ ದಿನಗಳಲ್ಲಿ ಐದು ಟಿಕೆಟ್/ಪಾಸ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಸರ್ಕಾರದ ಆಡಳಿತದಲ್ಲಿ ಈ ʼವಿಐಪಿ ಸಂಸ್ಕೃತಿ’ಗೆ ಪುರಸ್ಕಾರ ಸಿಗುತ್ತಿರುವುದು ಆಘಾತಕಾರಿಯಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಹಾಗೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಸರ್ಕಾರ ಅಥವಾ ಕೆಎಸ್‌ಸಿಎ ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಕ್ಲಾಸ್ ರೂಂ ಅಲ್ಲಿ ವಿದ್ಯಾರ್ಥಿಯನ್ನು ಉಗ್ರ ಎಂದು ಕರೆದ ಆರೋಪ : ಪ್ರೊಫೆಸರ್ ವಿರುದ್ಧ ‘FIR’ ದಾಖಲು

28/03/2026 3:44 PM1 Min Read

ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆರ್.ಮೋಹನ್ ಕುಮಾರ್ ಅವಿರೋಧ ಆಯ್ಕೆ

28/03/2026 3:38 PM2 Mins Read

JOB ALERT: ಏ.1ರಂದು ಶಿವಮೊಗ್ಗದಲ್ಲಿ ‘ವೈದ್ಯಾಧಿಕಾರಿ ಹುದ್ದೆ’ಗಳ ಭರ್ತಿಗೆ ನೇರ ಸಂದರ್ಶನ ಆಯೋಜನೆ

28/03/2026 3:14 PM1 Min Read
Recent News

BREAKING : ಕ್ಲಾಸ್ ರೂಂ ಅಲ್ಲಿ ವಿದ್ಯಾರ್ಥಿಯನ್ನು ಉಗ್ರ ಎಂದು ಕರೆದ ಆರೋಪ : ಪ್ರೊಫೆಸರ್ ವಿರುದ್ಧ ‘FIR’ ದಾಖಲು

28/03/2026 3:44 PM

‘ಪ್ರತಿ 2 ನಿಮಿಷಕ್ಕೊಂದು ವಿಮಾನ ಹಾರಾಟ ‘ ; ಏಷ್ಯಾದ ಅತಿದೊಡ್ಡ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

28/03/2026 3:41 PM

ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆರ್.ಮೋಹನ್ ಕುಮಾರ್ ಅವಿರೋಧ ಆಯ್ಕೆ

28/03/2026 3:38 PM

ಸಮಾಜವಾದಿ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿಗೆ ಪುರಸ್ಕಾರ : ನನಗೆ IPL ಟಿಕೆಟ್ ಬೇಡವೇ ಬೇಡ ಎಂದ ಸುರೇಶ್ ಕುಮಾರ್!

28/03/2026 3:30 PM
State News
KARNATAKA

BREAKING : ಕ್ಲಾಸ್ ರೂಂ ಅಲ್ಲಿ ವಿದ್ಯಾರ್ಥಿಯನ್ನು ಉಗ್ರ ಎಂದು ಕರೆದ ಆರೋಪ : ಪ್ರೊಫೆಸರ್ ವಿರುದ್ಧ ‘FIR’ ದಾಖಲು

By kannadanewsnow0528/03/2026 3:44 PM KARNATAKA 1 Min Read

ಬೆಂಗಳೂರು : ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಯನ್ನು ಉಗ್ರ ಎಂದು ಕರೆದ ಆರೋಪದ ಹಿನ್ನೆಲೆಯಲ್ಲಿ ಈಗ ಸಸ್ಪೆಂಡ್ ಆದ ಪ್ರೊಫೆಸರ್ ಮುರುಳಿದರ…

ಸತತ ಮೂರನೇ ಬಾರಿಗೆ ರಾಜ್ಯ ಸರ್ಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆರ್.ಮೋಹನ್ ಕುಮಾರ್ ಅವಿರೋಧ ಆಯ್ಕೆ

28/03/2026 3:38 PM

ಸಮಾಜವಾದಿ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿಗೆ ಪುರಸ್ಕಾರ : ನನಗೆ IPL ಟಿಕೆಟ್ ಬೇಡವೇ ಬೇಡ ಎಂದ ಸುರೇಶ್ ಕುಮಾರ್!

28/03/2026 3:30 PM

JOB ALERT: ಏ.1ರಂದು ಶಿವಮೊಗ್ಗದಲ್ಲಿ ‘ವೈದ್ಯಾಧಿಕಾರಿ ಹುದ್ದೆ’ಗಳ ಭರ್ತಿಗೆ ನೇರ ಸಂದರ್ಶನ ಆಯೋಜನೆ

28/03/2026 3:14 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.