ಚಾಮರಾಜನಗರ: ಗಡಿಜಿಲ್ಲೆಯ ಕೆಲವು ಠಾಣೆಗಳು ಮುಂಬಾಗಿಲಿನ ಗೇಟ್ ಇರಲಿ, ಬಾಗಿಲಿಗೆ ಬೀಗ ಹಾಕುವ ಪ್ರತೀತಿ ಇದೆ ಎಂದರೆ ನಂಬುತ್ತೀರಾ..!? ಖಂಡಿತ ನಂಬಲೇಬೇಕಿದೆ.
ಗಡಿ ಜಿಲ್ಲೆಯ ಕೆಲ ಠಾಣೆಗಳಿಗೆ, ರಾತ್ರಿ ಸಮಯದಲ್ಲಿ ದೂರುದಾರರು ಬರೊಲ್ಲ ಅಂತಾನೊ, ಗಲಾಟೆ ಆದಾಗ ಪ್ರಾಥಮಿಕ ಹಂತದಲ್ಲೆ ಕೆಲ ಸಿಬ್ಬಂದಿಗಳು ತಾತ್ಕಲಿಕ ಪರಿಹಾರ ಮಾಡ್ತಾರೆ ಅಂತ ಇವರುಗಳೆ ನಿರ್ದರಿಸಿಕೊಂಡು ಠಾಣಾ ಅದಿಕಾರಿಗಳೆ ಠಾಣೆ ಗೇಟ್ ಹಾಗೂ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗುವ ಪ್ರತೀತಿ ಇದೆಯೆ ಎಂಬ ಅನುಮಾನ ಮೂಡಿಸುತ್ತಿದೆ .
ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಸೆನ್ ಠಾಣೆ ಹಾಗೂ ಮಹಿಳಾ ಠಾಣೆಗಳು ಆಗಾಗ ರಾತ್ರಿ ಸಮಯದಲ್ಲಿ ಬಾಗಿಲು ಹಾಕಲಾಗುತ್ತದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ 26 ರ ರಾತ್ರಿ 9 ರ ಸಮಯದಲ್ಲಿ ಬಾಗಿಲಿಗೆ ಬೀಗ ಹಾಕಿದೆ ಅಷ್ಡೆ ಅಲ್ಲ 27 ರ ರಾತ್ರಿ ಸೆನ್ ಪೊಲಿಸ್ ಠಾಣೆ ಹಾಗೂ ಮುಂಜಾನೆ 8 ರ ಸಮಯದಲ್ಲೂ ಗೇಟ್ ಹಾಗೂ ಠಾಣೆಯ ಬಾಗಿಲಿಗೆ ಬೀಗ ಹಾಕಲಾಗಿದೆ.
ಸೆನ್ ಪೊಲೀಸ್ ಠಾಣೆಯು ಇತ್ತೀಚೆಗಷ್ಡೆ ಮೈಸೂರು ಸೆನ್ ಎಸ್ಪಿ ಅ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದಾರೂ ಸದ್ಯಕ್ಕೆ ಚಾಮರಾಜನಗರ ಎಸ್ಪಿ ಅವರು ವ್ಯಾಪ್ತಿಗೆ ಬರೊಲ್ಲ ಅಂತ ನಿರ್ದರಿಸಿಕೊಂಡು ಅದಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನ ಮಹಿಳಾ ಠಾಣೆಯವರೂ ಠಾಣೆಗೆ ರಾತ್ರಿ ಸಮಯದಲ್ಲಿ ಯಾರೂ ಬರ್ತಾರೆ ಅಂತ ನಿರ್ದರಿಸಿಕೊಂಡು ಹೋಗಿ ಬಿಡ್ತಾರೆ..ದೂರುಗಳು ಬಂದಾಗ ಹೊರಗೆ ಹೋಗಿದ್ವು, ಊಟಕ್ಕೆ ಹೊಗಿದ್ವು ಅಂತಾನೊ
ಯಾವ್ದಾದರೂಂದು ನೆಪ ಹೇಳಿ ನುಣುಚುಕೊಳ್ತಾರೆ.
ಹಿಂದೊಮ್ಮೆ ನ್ಯಾಯಾದೀಶರೊಬ್ಬರು ಸೆನ್ ಠಾಣೆಗೆ ದಿಡೀರ್ ಭೇಟಿ ನೀಡಿದಾಗ ಬೀಗ ಹಾಕಲಾಗಿದ್ದಕ್ಕೆ ಕಾರಣ ಕೇಳಿದಾಗ ಕ್ಷುಲಕ ನೆಪವೊಡ್ಡಿ ಹಿನ್ನಲೆಯಲ್ಲಿ ಇನ್ಸ್ ಪೆಕ್ಟರ್ ಒಬ್ಬರು ಅಮಾನತ್ತಾಗಿದ್ದರು.
ದಿನದ 24 ಗಂಟೆ ಕಾರ್ಯನಿರ್ವಹಣೆ ಮಾಡುವ ಇಲಾಖೆ ಎಂದು ಪೊಲೀಸ್ ಇಲಾಖೆ ಹೇಳಲ್ಪಟ್ಟರೂ, ಯಾರಾದರೊಬ್ಬ ಸಿಬ್ಬಂದಿ ಇರಬೇಕು ಎಂಬ ನಿಯಮ ಇದ್ದರೂ ಇದೆಲ್ಲ ಮಾಯವಾಗಿ ಠಾಣೆಗಳಿಗೆ ಬೀಗ ಬೀಳುತ್ತಿರೋದು ವಿಪರ್ಯಾಸವಾಗಿದೆ. ಹಿಂದೊಮ್ಮೆ ಸೆನ್ ಠಾಣೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದ ವಾಹನ ಕಳ್ಳತನವಾದಾಗ ಪತ್ತೆ ಹಚ್ಚಿದ್ದರು ಇಲ್ಲವಾಗಿದ್ದಲ್ಲಿ ಶಿಸ್ತಿನ ಕ್ರಮ ಜರುಸಿಗ್ತಾ ಇದ್ದರು.
ಕೆಲವು ಠಾಣೆಗಳಲ್ಲಿ ಕೆಲವರು ವರ್ಗಾವಣೆ ಆದರೂ ಹೋಗದೆ ಇರುವ ಸಂಗತಿಗಳು, ವರ್ಗಾವಣೆ ಆದರೂ ಆಯಾ ಠಾಣೆಗಳಲ್ಲಿ ಕರ್ತವ್ಯ ನಿರ್ಚಹಣೆ ಮಾಡದ ಆರೋಪಗಳು ಕೇಳಿ ಬರುತ್ತಿದ್ದು
ಡಿಜಿಪಿ ಸಲೀಂ ಅವರು ಸಂಬಂಧಿಸಿದ ಅದಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಕ್ರಮವಹಿಸೊ ಅಗತ್ಯವಿದೆ. ಇಲ್ಲವಾದರೆ ಠಾಣೆಗಳು ಎಂಬ ಪರಿಕಲ್ಪನೆ ಮುಂದಿನ ದಿನಗಳಲ್ಲಿ ಮಾಯ ಆಗಬಹುದು.
ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ








