ಶಿವಮೊಗ್ಗ : ರಾಜ್ಯದಲ್ಲಿ ಹೃದಯವಿದ್ರಾವಕ ಒಂದು ನಡೆದಿದ್ದು ಶಿವಮೊಗ್ಗದಲ್ಲಿ ವಿದ್ಯಾರ್ಥಿ ಒಬ್ಬ ತಂದೆಯ ಸಾವಿನ ದುಃಖದಲ್ಲಿಯೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾನೆ ಇಂದು ಎಸ್ ಎಸ್ ಎಲ್ ಸಿ ಗಣಿತ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿ ಪ್ರೀತಮ್ ತಂದೆ ಸಾವಿನ ದುಃಖದಲ್ಲೂ ಕೂಡ ಪರೀಕ್ಷೆ ಬರೆಯುತ್ತಿದ್ದಾನೆ.
ಶಿವಮೊಗ್ಗ ತಾಲೂಕಿನ ಮಂಡಘಟ್ಟ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಆಗಿರುವ ಪ್ರೀತಂ ಎಣ್ಣೆ ಅವರ ತಂದೆ ಸಾವನಪ್ಪಿದ್ದರು. ತಂದೆಯಾಸ್ ಸಾವಿನ ಹಿನ್ನೆಲೆಯಲ್ಲಿ ಪ್ರೀತಮ್ ಪರೀಕ್ಷೆಗೆ ಗೈರಾಗಲು ಮುಂದಾಗಿದ್ದ. ವಿಷಯ ತಿಳಿದ ತಕ್ಷಣ ಶಿವಮೊಗ್ಗದ ಬಿಇಓ ರಮೇಶ್ ವಿದ್ಯಾರ್ಥಿ ಪ್ರೀತಮ್ ಅವರ ಮನೆಗೆ ತೆರಳಿದ್ದಾರೆ.
ಗಣಿತ ಪರೀಕ್ಷ ಇದೆ ವರ್ಷ ಪೂರ್ತಿ ಕಷ್ಟಪಟ್ಟು ಓದಿದ್ದೀರಿ ತಂದೆ ಸಾವನಪ್ಪಿದ್ದಾರೆ ದುಃಖವಿದೆ ಎಂದು ವಿದ್ಯಾರ್ಥಿ ಪ್ರೀತಂ ಹಾಗೂ ಕುಟುಂಬಸ್ಥರಿಗೆ ಧೈರ್ಯ ಹೇಳಿ ಅವರ ಮನವೊಲಿಸಿದ್ದಾರೆ. ಬಳಿಕ ಪ್ರೀತಂ ನನ್ನ ತಮ್ಮ ವಾಹನದಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.








