ಧಾರವಾಡ : ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗ ಜೈಲಿಗೆ ಕೈದಿಗಳಿಗೆ ಡ್ರಗ್ಸ್ ಸಿಗರೇಟ್ ಇತರೆ ಮಾದಕ ವಸ್ತುಗಳನ್ನು ಪೂರೈಕೆ ಮಾಡಿದ ಪ್ರಕರಣ ನಡೆದಿತ್ತು. ಇದರ ಬೆನ್ನಲ್ಲೇ ಇದೀಗ ಧಾರವಾಡದಲ್ಲಿ ಜೈಲಿನ ವಾರ್ಡರ್ ಗಳೇ ಕೈದಿಗಳಿಗೆ ಗುಟ್ಕಾ ಸಿಗರೇಟ್ ಪೂರೈಕೆ ಮಾಡುತ್ತಿದ್ದು ಈ ಹಿನ್ನೆಲೆ ಮೂವರ ವಿರುದ್ಧ ಪೊಲೀಸರು ಇದೀಗ FIR ದಾಖಲಿಸಿದ್ದಾರೆ.
ಹೌದು ಧಾರವಾಡದ ಕೇಂದ್ರ ಕಾರಾಗೃಹ ಅಂದ್ರೆ ಕೈದಿಗಳಿಗೆ ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದು ಸತ್ಯ ಎಂಬಂತೆ ಕಾರಾಗೃಹದಲ್ಲಿ ಘಟನೆಯೊಂದು ನಡೆದಿದೆ. ಕೈದಿಗಳಿಗೆ ವಾರ್ಡರ್ಗಳೇ ನಿಷೇಧಿತ ತಂಬಾಕು ಉತ್ಪನ್ನಗಳನ್ನ ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೇಲಿಯೇ ಎದ್ದು ಹೊಲ ಮೇಯಿತು ಎಂಬಂತೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ಇಬ್ಬರು ವಾರ್ಡರ್ಗಳು ಕೈದಿಗಳಿಗೆ ಸಿಗರೇಟು, ಗುಟ್ಕಾ ಶೀಟ್ಗಳನ್ನ ಪೂರೈಕೆ ಮಾಡುತ್ತಿದ್ದರು. ಕೊನೆಗೆ ಇಬ್ಬರನ್ನೂ ರೆಡ್ಹ್ಯಾಂಡಾಗಿ ಹಿಡಿದಿರುವ ಧಾರವಾಡ ಉಪನಗರ ಠಾಣೆ ಪೊಲೀಸರು, ಕಾರಾಗೃಹದ ಇಬ್ಬರು ವಾರ್ಡರ್ ಹಾಗೂ ಸಾಮಗ್ರಿ ಪೂರೈಸುತ್ತಿದ್ದ ಓರ್ವ ಆಟೋ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಮಾರ್ಚ್ 8 ರಂದು ಬೆಳಗಿನ ಜಾಗ 3 ಗಂಟೆಗೆ ಆಟೋ ಚಾಲಕ ಜೈಲಿನ ಬಾಗಿಲಿಗೆ ಚೀಲ ಒಂದು ತಂದು ಇಟ್ಟಿದ್ದ. ಅದು ಒಳಗೆ ಹೋಗಿದ್ದನ್ಬ ನೋಡಿದ್ದ ಜೈಲಾಧಿಕಾರಿ ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ದೂರು ನೀಡಿದ್ದರು. ಈಗ ಹೀಗಾಗಿ ಮಾರ್ಚ್ 23ಕ್ಕೆ ದೂರು ಕೂಡಾ ದಾಖಲು ಮಾಡಿಕೊಳ್ಳಲಾಗಿತ್ತು. ಈಗ ಈ ಪ್ರಕರಣದಲ್ಲಿ ಮೂವರು ಲಾಕ್ ಆಗಿದ್ದಾರೆ.
ಕಾರಾಗೃಹ ಅಂದ್ರೆ ಒಬ್ಬ ಕೈದಿ ತಾನು ನರಕಯಾತನೆ ಅನುಭವಿಸಲು ಬಂದ ಸ್ಥಳವಿದ್ದಂತೆ. ಆದರೆ, ಧಾರವಾಡದ ಈ ಕಾರಾಗೃಹ ಕೈದಿಗಳಿಗೆ ನರಕ ಅಲ್ಲ ಸ್ವರ್ಗದಂತಾಗಿದೆ. ಈ ಕಾರಾಗೃಹದಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ಅಲ್ತಾಫ್ ಶೇಖಸನದಿ, ರಾಜು ಸೊಲಬಣ್ಣವರ ಎಂಬುವವರೇ ಕೈದಿಗಳಿಗೆ ಗುಟ್ಕಾ ಮಾರಾಟ ಮಾಡಿ ಹೆಚ್ಚಿನ ಹಣ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.








