ತುಮಕೂರು : ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಎಸಲಾಗಿದೆ. ಬರೋಬ್ಬರಿ 15 ಯುವಕರಿಂದ ಮೂರರಿಂದ ಐದು ಲಕ್ಷ ಪಡೆದು ವಂಚನೆ ಎಸಗಲಾಗಿದೆ. ಮೈಸೂರಿನ ಅರಣ್ಯ ಪ್ರದೇಶದಲ್ಲಿ ಹುದ್ದೆ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಲಾಗಿದೆ. ಯುವಕರಿಗೆ ನಕಲಿ ನೇಮಕಾತಿ ಆದೇಶ ಪ್ರತಿನಿಧಿ ಕಳುಹಿಸಿ ವಂಚನೆ ಎಸಲಾಗಿದೆ.
ಇನ್ನು ತರಬೇತಿ ನೆಪದಲ್ಲಿ ತೋಟದ ಮನೆಯಲ್ಲಿ ಯುವಕರಿಗೆ ಟ್ರೇನಿಂಗ್ ಕೂಡ ಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ನಕಲಿ ಲೆಟರ್ ಹೆಡ್ ಬಳಸಿ ಯುವಕರಿಗೆ ನಕಲಿ ಆದೇಶ ಪತ್ರ ಕೂಡ ನೀಡಿದ್ದಾರೆ. ತರಬೇತಿ ನೆಪದಲ್ಲಿ ತೋಟದ ಮನೆಯಲ್ಲಿ ಯುವಕರಿಗೆ ಟ್ರೇನಿಂಗ ನೀಡಿದ್ದು, ತುಮಕೂರು ತಾಲೂಕಿನ ವಡ್ಡರಹಳ್ಳಿಯಲ್ಲಿ ನಕಲಿ ತರಬೇತಿ ಕೂಡ ಕೊಟ್ಟಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಇದೀಗ ಯುವಕರು ದೂರು ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವನ್ ಮತ್ತು ಕಿರಣ್ ಎಂಬ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.








