ನೈಸರ್ಗಿಕ ಅನಿಲ ಬಳಕೆಯನ್ನು ಉತ್ತೇಜಿಸಲು ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರ ಅನ್ವಯ, ಪಿಎನ್‌ಜಿ ಸೌಲಭ್ಯವಿರುವ ಪ್ರದೇಶಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬವು ಕಡ್ಡಾಯವಾಗಿ ಪಿಎನ್‌ಜಿ ಸಂಪರ್ಕವನ್ನು ಪಡೆಯಬೇಕಾಗುತ್ತದೆ.
ನಿಮ್ಮ ಪ್ರದೇಶದಲ್ಲಿ ಪಿಎನ್‌ಜಿ ಪೈಪ್‌ಲೈನ್ ಲಭ್ಯವಿದ್ದರೆ, ನೀವು ಕಡ್ಡಾಯವಾಗಿ ಸಂಪರ್ಕ ಪಡೆಯಬೇಕು. ಒಂದು ವೇಳೆ ಪಡೆಯದಿದ್ದರೆ, 3 ತಿಂಗಳ ನಂತರ ನಿಮ್ಮ ಎಲ್‌ಪಿಜಿ (ಸಿಲಿಂಡರ್) ಗ್ಯಾಸ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು.
ವಿನಾಯ್ತಿ
ತಾಂತ್ರಿಕ ಕಾರಣಗಳಿಂದ ಅಥವಾ ಸುರಕ್ಷತೆಯ ದೃಷ್ಟಿಯಿಂದ ನಿಮ್ಮ ಮನೆಯಲ್ಲಿ ಪೈಪ್ ಲೈನ್ ಅಳವಡಿಸಲು ಸಾಧ್ಯವಿಲ್ಲದಿದ್ದರೆ, ಗ್ಯಾಸ್ ಕಂಪನಿಯಿಂದ ‘ಎನ್‌ಒಸಿ’ (ನಿರಕ್ಷೇಪಣಾ ಪತ್ರ) ಪಡೆದು ಸಿಲಿಂಡರ್ ಸೇವೆಯನ್ನು ಮುಂದುವರಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಗ್ರಾಹಕರು ತಮ್ಮ ಭಾಗದ ಗ್ಯಾಸ್ ವಿತರಕರ (ಉದಾಹರಣೆಗೆ: IGL, MGL ಅಥವಾ ಸ್ಥಳೀಯ ಸಂಸ್ಥೆಗಳು) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ‘New PNG Connection’ ಆಯ್ಕೆಯ ಮೂಲಕ ಅರ್ಜಿ ಸಲ್ಲಿಸಬಹುದು. ಹೆಸರು, ವಿಳಾಸ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್, ವಿಳಾಸದ ಪುರಾವೆ ಮತ್ತು ಮಾಲೀಕತ್ವದ ದಾಖಲೆಗಳು ಬೇಕಾಗುತ್ತವೆ.
ವೆಚ್ಚ: ಆನ್‌ಲೈನ್‌ನಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿದ ನಂತರ, ಕಂಪನಿಯ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ ಮತ್ತು ಪೈಪ್‌ಲೈನ್ ಅಳವಡಿಸುತ್ತಾರೆ. (ವೆಚ್ಚವು ಆಯಾ ಕಂಪನಿ ಮತ್ತು ಪ್ರದೇಶಕ್ಕೆ ಅನುಗುಣವಾಗಿ ವ್ಯತ್ಯಾಸವಿರುತ್ತದೆ).
ಪಿಎನ್‌ಜಿ ಲಾಭಗಳೇನು?
ಸಿಲಿಂಡರ್ ಬುಕ್ ಮಾಡುವ ಕಿರಿಕಿರಿ ಇರುವುದಿಲ್ಲ ಮತ್ತು ಇದು ಸಾಮಾನ್ಯ ಸಿಲಿಂಡರ್ ಗ್ಯಾಸ್‌ಗಿಂತ ಸುರಕ್ಷಿತ ಹಾಗೂ ಆರ್ಥಿಕವಾಗಿ ಲಾಭದಾಯಕ ಎಂದು ವರದಿ ತಿಳಿಸಿದೆ.
ಈ ಹೊಸ ನಿಯಮವು ‘ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನ ವಿತರಣಾ ಆದೇಶ 2026’ರ ಅಡಿಯಲ್ಲಿ ಜಾರಿಗೆ ಬರಲಿದೆ.








