ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. “ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಇನ್ನು ಮುಂದೆ ಪಶ್ಚಾತ್ತಾಪ ಪಟ್ಟು ಹಿಂದೆ ಸರಿಯಲು ಅವಕಾಶವಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ.
ಇತ್ತೀಚೆಗೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳು ಮತ್ತು ಸಂಘರ್ಷದ ಹಾದಿಯನ್ನು ಉದ್ದೇಶಿಸಿ ಮಾತನಾಡಿರುವ ಟ್ರಂಪ್, ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.ಒಮ್ಮೆ ಸಂಘರ್ಷ ಪೂರ್ಣ ಪ್ರಮಾಣದ ಯುದ್ಧಕ್ಕೆ ತಿರುಗಿದರೆ, ಅದರ ಪರಿಣಾಮಗಳನ್ನು ಇರಾನ್ ಎದುರಿಸಲೇಬೇಕು. ಆಗ ಮಾತುಕತೆಗೆ ಅಥವಾ ಹಿಂದಕ್ಕೆ ಸರಿಯಲು ಯಾವುದೇ ದಾರಿ ಇರುವುದಿಲ್ಲ (No Turning Back) ಎಂದು ಅವರು ಎಚ್ಚರಿಸಿದ್ದಾರೆ.
ಯುದ್ಧ ಪೀಡಿತ ಇರಾನ್: ಈಗಾಗಲೇ ಆರ್ಥಿಕ ದಿಗ್ಬಂಧನ ಮತ್ತು ಸರಣಿ ದಾಳಿಗಳಿಂದ ತತ್ತರಿಸಿರುವ ಇರಾನ್‌ಗೆ, ಟ್ರಂಪ್ ಅವರ ಈ ಮಾತುಗಳು ಮತ್ತಷ್ಟು ಆತಂಕ ತಂದೊಡ್ಡಿವೆ.
ಅಮೆರಿಕದ ಈ ಕಠಿಣ ನಿಲುವು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯ ಬದಲಿಗೆ, ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ.








