ದಾವಣಗೆರೆ : ದಾವಣಗೆರೆಯಲ್ಲಿ ಕಾಂಗ್ರೆಸ್ ಗೆ ಇದೀಗ ಬಿಗ್ ಶಾಕ್ ಎದುರಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದೀಕ್ ಪೈಲ್ವಾನ್ ಮನವೊಲಿಕೆಗೆ ಬಗ್ಗದೆ ನಾಮಪತ್ರ ವಾಪಸ್ ಪಡೆಯದ ಸಾಧಿಕ್, ನಾನು ಹಿಂದೆ ಸರಿದರೆ ಸಮಾಜ ಹಿಂದೆ ಸರಿದಂತೆ ಹೇಳಿಕೆ ನೀಡಿದ್ದಾರೆ.
ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ಚುನಾವಣೆ ಯಲ್ಲಿ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ನಾನು ಹಿಂದೆ ಸರಿದರೆ ಸಮಾಜ ಹಿಂದೆ ಸರಿದಂತೆ. ನಾನು ಸೋತರೆ ಸಮಾಜ ಸೋತಂತೆ ಸಮಾಜ ಸೋತ್ರೆ ನಾನು ಸೋತಂತೆ ಯಾವ ಕಾರಣಕ್ಕೂ ನಾನು ಚುನಾವಣೆಯಿಂದ ಹಿಂದೆ ಸರಿಯಲ್ಲ. ಅಖಾಡದಲ್ಲಿ ಇರುತ್ತೇನೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಮಾಡುತ್ತೇನೆ ನನಗೆ ಜನ ಆಶ್ವಾಸನೆ ಕೊಟ್ಟಿದ್ದಾರೆ ಆ ನಿಟ್ಟಿನಲ್ಲಿ ನಾನು ಜನಗಳ ಸೇವೆ ಮಾಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.








