ಬೆಂಗಳೂರು : ಹೈಕಮಾಂಡ್ ಒಪ್ಪಿದ್ರೆ ಮುಂದಿನ ಎರಡು ಬಜೆಟ್ ನಾನೇ ಮಂಡಿಸುವೆ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಸದನದಲ್ಲಿ ಪುನರುಚ್ಚರಿಸಿದ್ದಾರೆ. ಹೈಕಮಾಂಡ್ ಮಾತನ್ನು ಎಲ್ಲರೂ ಕೇಳಲೇಬೇಕು. ನಾನು ಏನು ಹೈಕಮಾಂಡ್ ಮಾತು ಕೇಳಲ್ಲ ಅಂತಾ ಹೇಳಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಸದನದಲ್ಲಿ ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಿದರು.
ಬಜೆಟ್ ಚರ್ಚೆ ಮೇಲೆ ಉತ್ತರದ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತೆ ಎರಡು ಬಜೆಟ್ ಮಂಡಿಸಬೇಕಿದೆ ನೀವು ಎಂಬ ಮಾತಿಗೆ ಪ್ರತಿಕ್ರಿಯಿಸುತ್ತಾ, ಮುಂದಿನ ಎರಡು ವರ್ಷ ನಮ್ಮ ಸರ್ಕಾರನೇ ಬಜೆಟ್ ಮಂಡಿಸಲಿದೆ. ಹೈಕಮಾಂಡ್ ಒಪ್ಪಿದರೆ ಮತ್ತೆರಡು ಬಜೆಟ್ ನಾನೇ ಮಂಡಿಸ್ತೇನೆ. ಈ ಬಾರಿಯೂ ನಾವೇ ಅಧಿಕಾರದಲ್ಲಿದ್ದೇವೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಪುನರುಚ್ಚರಿಸಿದರು.
ಈ ವೇಳೆ, ಮಧ್ಯಪ್ರವೇಶಿಸಿದ ಸುನಿಲ್ ಕುಮಾರ್, ಜೆಡಿಎಸ್ನಲ್ಲಿದ್ದಾಗ ನೀವು ರಾಷ್ಟ್ರೀಯ ಅಧ್ಯಕ್ಷರ ಮಾತು ಕೇಳಿಲ್ಲ ಅಂತ ಹೇಳಿದ್ದೀರಿ. ಅದೇ ರೀತಿ ಇವಾಗ್ಲೂ ನಿಮ್ಮ ರಾಷ್ಟ್ರೀಯ ನಾಯಕರ ಮಾತು ಕೇಳಬಾರದು. ರಾಜ್ಯದ ಗಟ್ಟಿ ನಾಯಕ ನೀವು. ನಿಮ್ಮ ಮುಂದೆ ಯಾವ ಹೈಕಮಾಂಡ್ ಸರ್ ಎಂದು ಸವಾಲು ಹಾಕಿದರು. ಅದಕ್ಕೆ ನಿಮಗೆ ಧಮ್ ಇದ್ದರೆ ಮೋದಿ ಮಾತನ್ನು ಕೇಳಲ್ಲ ಅಂತಾ ನೀವೂ ಹೇಳಿ ಎಂದು ಸಿಎಂ ತಿರುಗೇಟು ನೀಡಿದರು.








