ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಆರು ಲಕ್ಷ ರೂಪಾಯಿ ನಗದನ್ನು ಒಳಗೆ ಸಾಗಿಸಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಕೆಂಗಲ್ ಗೇಟ್ ಮೂಲಕ ಪ್ರವೇಶಿಸಲು ಯತ್ನಿಸುತ್ತಿದ್ದ ಯುವಕನ ಬ್ಯಾಗ್ ತಪಾಸಣೆ ನಡೆಸಿದಾಗ ಈ ಭಾರಿ ಮೊತ್ತದ ಹಣ ಪತ್ತೆಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಲೆಟರ್ ಹೆಡ್ ಪಡೆಯುವ ಉದ್ದೇಶದಿಂದ ಬಂದಿರುವುದಾಗಿ ಹೇಳಿಕೊಂಡ ಈ ಯುವಕ, ತನ್ನ ಬ್ಯಾಗ್‌ನಲ್ಲಿ ಆರು ಲಕ್ಷ ರೂಪಾಯಿ ಹಣವನ್ನು ಬಚ್ಚಿಟ್ಟುಕೊಂಡಿದ್ದ. ಭದ್ರತಾ ತಪಾಸಣೆಯ ವೇಳೆ ಹಣ ಪತ್ತೆಯಾದಾಗ, ಇಷ್ಟು ದೊಡ್ಡ ಮೊತ್ತದೊಂದಿಗೆ ಒಳಗೆ ಹೋಗಲು ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿ ವಾಪಸ್ ಹೋಗುವಂತೆ ಸೂಚಿಸಿದರು. ಆದರೆ, ಶಾಸಕರನ್ನು ಭೇಟಿಯಾಗಲೇಬೇಕು ಎಂದು ಯುವಕ ಹಠ ಹಿಡಿದಿದ್ದರಿಂದ ಅನುಮಾನಗೊಂಡ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದು ಎಸಿಪಿ ಕೃಷ್ಣಯ್ಯ ಅವರ ಕಚೇರಿಗೆ ಕರೆದೊಯ್ದು ತೀವ್ರ ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯ ವೇಳೆ ಯುವಕ ವಿಚಿತ್ರ ಸಮರ್ಥನೆ ನೀಡಿದ್ದು, “ನನ್ನ ದೊಡ್ಡಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರ ಚಿಕಿತ್ಸೆಯ ವೆಚ್ಚಕ್ಕಾಗಿ ಈ ಹಣವನ್ನು ತಂದಿದ್ದೆ. ಅದೇ ಸಮಯದಲ್ಲಿ ಶಾಸಕರ ಬಳಿ ಕೆಲಸವಿದ್ದಿದ್ದರಿಂದ ಇಲ್ಲಿಗೆ ಬಂದೆ” ಎಂದು ಹೇಳಿಕೆ ನೀಡಿದ್ದಾನೆ. ಸದ್ಯ ವಿಧಾನಸೌಧ ಪೊಲೀಸರು ಈ ಹಣದ ಮೂಲ ಯಾವುದು ಮತ್ತು ಶಾಸಕರ ಭೇಟಿಯ ಹಿಂದಿನ ಉದ್ದೇಶವೇನು ಎಂಬ ಬಗ್ಗೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
BREAKING: ‘ಹೋಟೆಲ್ ಬಿಲ್’ಗಳಲ್ಲಿ ‘ಗ್ಯಾಸ್ ಚಾರ್ಜ್’ ವಸೂಲಿ ಮಾಡುವಂತಿಲ್ಲ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ
ವಿಧಾನಸಭೆಯಲ್ಲಿ ‘ಸಿಎಂ’ ಚರ್ಚೆಯ ಕಚಗುಳಿ: ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಡಿಕೆಶಿ ಹೆಸರಿನ ಬಗ್ಗೆ ಚಾಣಾಕ್ಷ ಮೌನ!








