ಬೆಂಗಳೂರು : ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಇಂದು ಚರ್ಚೆ ನಡೆಯಿತು. ಹೈಕಮಾಂಡ್ ಹೇಳಿದಾಗ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಈ ವೇಳೆ ಸಿಎಂ ಆಗುವ ಆಸೆ ಇಲ್ಲವಾ ಅಂತ ಆರ್ ಅಶೋಕಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಸಿಎಂ ಆಗಬೇಕು ಅನ್ನೋದನ್ನು ಹೇಳಲಾಗದೆ ಆರ್ ಅಶೋಕ್ ಈ ವೇಳೆ ನಕ್ಕಿದ್ದಾರೆ. ಅಶೋಕ ಆದರೂ ಸಿಎಂ ಆಗಲಿ ಬೆಲ್ಲದ ಆದರೂ ಸಿಎಂ ಆಗಲಿ, ಅಶ್ವತ್ ನಾರಾಯಣ ಸಿಎಂ ಆದರು ಸಹ ಸಂತೋಷವೇ, ಆದರೆ ವಿಜಯೇಂದ್ರ ನೀವು ಸಿಎಂ ಆಗೋಕೆ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲು ಎಳೆದರು.
ಈ ವೇಳೆ ಶಾಸಕ ಸುನಿಲ್ ಕುಮಾರ್ ಡಿಕೆ ಶಿವಕುಮಾರ್ ಸಿಎಂ ಆಗಲಿ ಅಂತ ಒಂದು ಬಾರಿ ಹೇಳಲಿಲ್ಲವಲ್ಲ ಎಂದಾಗ ಹೈಕಮಾಂಡ್ ನವರು ಯಾವಾಗ ತೀರ್ಮಾನ ಮಾಡುತ್ತಾರೆ ಆಗ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ. ಇಲ್ಲಿರುವ 224 ಶಾಸಕರು ಕೂಡ ಮುಖ್ಯಮಂತ್ರಿ ಆಗಲು ಅರ್ಹರಿದ್ದಾರೆ. ನಮ್ಮಲ್ಲಿ ಅನೇಕರು ಮುಖ್ಯಮಂತ್ರಿ ಆಗುವುದಕ್ಕೆ ಅರ್ಹರಿದ್ದಾರೆ. ಎಮ್ ಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಅನೇಕರಿಗೆ ಸಿಎಂ ಆಗುವ ಅರ್ಹತೆ ಇದೆ ಆದರೆ ಅವಕಾಶ ಇಲ್ಲ ಇದೇ ವೇಳೆ ಒಮ್ಮೆಯೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಲಿಲ್ಲ.








