ನವದೆಹಲಿ: ಭಾರತೀಯ ಮಾರುಕಟ್ಟೆಯಲ್ಲಿ ತೂಕ ಇಳಿಸುವ ಉದ್ದೇಶದ ಜೆನೆರಿಕ್ ಇಂಜೆಕ್ಷನ್‌ಗಳು (Generic Weight Loss Jabs) ಅತಿಯಾಗಿ ಲಭ್ಯವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಕಠಿಣ ಎಚ್ಚರಿಕೆಯನ್ನು ನೀಡಿದೆ. “ಇವು ಕೇವಲ ಜೀವನಶೈಲಿಯ ಸುಧಾರಣೆಯ ಔಷಧಿಗಳಲ್ಲ (Not a lifestyle drug), ಇವುಗಳನ್ನು ವೈದ್ಯಕೀಯ ಸಲಹೆಯಿಲ್ಲದೆ ಬಳಸುವುದು ಅಪಾಯಕಾರಿ,” ಎಂದು ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.
ಕೇವಲ ತೆಳ್ಳಗೆ ಕಾಣುವ ಉದ್ದೇಶದಿಂದ ಅಥವಾ ಫಿಟ್‌ನೆಸ್‌ಗಾಗಿ ಈ ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳಬಾರದು. ಇವುಗಳನ್ನು ಕೇವಲ ತೀವ್ರ ಬೊಜ್ಜು (Obesity) ಮತ್ತು ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಮಾತ್ರ ವೈದ್ಯರು ಶಿಫಾರಸು ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.
ವಿದೇಶಿ ಬ್ರ್ಯಾಂಡ್‌ಗಳಾದ ಓಜೆಂಪಿಕ್ (Ozempic) ಮತ್ತು ವೆಗೋವಿ (Wegovy) ಮಾದರಿಯ ಅಗ್ಗದ ಜೆನೆರಿಕ್ ಆವೃತ್ತಿಗಳು ಭಾರತೀಯ ಮಾರುಕಟ್ಟೆಯಲ್ಲಿ ಮತ್ತು ಆನ್‌ಲೈನ್‌ನಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿವೆ. ಇವುಗಳ ಗುಣಮಟ್ಟದ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಇವುಗಳನ್ನು ಬಳಸುವುದರಿಂದ ಕಿಡ್ನಿ ಸಮಸ್ಯೆ, ಮೇದೋಜ್ಜೀರಕ ಗ್ರಂಥಿಯ ಉರಿಯೂತ (Pancreatitis) ಮತ್ತು ಥೈರಾಯ್ಡ್ ಗೆಡ್ಡೆಗಳಂತಹ ಗಂಭೀರ ಅಪಾಯಗಳು ಎದುರಾಗಬಹುದು ಎಂದು ಎಚ್ಚರಿಸಲಾಗಿದೆ.








