ಬೆಂಗಳೂರು : ನಮ್ಮ ಮೆಟ್ರೋ 3ನೇ ಹಂತಕ್ಕಾಗಿ ಭಾರತ ಜಪಾನ್ ನಿಂದ ಸಾಲ ಪಡೆದುಕೊಂಡಿದ್ದು ಎರಡು ಹಂತದಲ್ಲಿ 6775 ಕೋಟಿ ರೂಪಾಯಿ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಜಪಾನ ಸಂಸ್ಥೆ ಜೊತೆಗೆ ಭಾರತ ಸರ್ಕಾರ ಇದೀಗ ಸಹಿ ಹಾಕಿದೆ. ಜಪಾನ್ ಇಂಟರ್ನ್ಯಾಷನಲ್ ಕೋ-ಆಪರೇಟಿವ್ ಏಜೆನ್ಸಿ ಇಂದ ಸಾಲ ಪಡೆದುಕೊಳ್ಳಲಾಗಿದೆ. ಜಪಾನಿಂದ 30 ವರ್ಷಗಳ ಅವಧಿಯ ಸಾಲ ಪಡೆದಿದೆ.
ಮೊದಲ ಹಂತದಲ್ಲಿ 6,100 ಕೋಟಿ ಸಾಲ ಮಂಜೂರು ಆಗಿದ್ದು ಉಳಿದ ಮೊತ್ತದ ಹಣ ಎರಡನೇ ಹಂತದಲ್ಲಿ ಮಂಜೂರು ಮಾಡಲಾಗುತ್ತೆ. ಮೂರನೇ ಹಂತದಲ್ಲಿ ಆರೆಂಜ್ ಲೈನ್ ನಿರ್ಮಾಣ ಆಗಲಿದೆ 44.6 ಕಿಲೋಮೀಟರ್ ಉದ್ದದ ಮೆಟ್ರೋದ ಮೂರನೇ ಹಂತ ನಿರ್ಮಾಣ ಆಗಲಿದೆ ಜೆಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರದ ಮಾರ್ಗ ಹೊಸಹಳ್ಳಿಯಿಂದ ಕಡಬಗೆರೆ ಮಾರ್ಗದ ಲೈನ್ ನಿರ್ಮಾಣ ಆಗಲಿದೆ. ಮೇ ತಿಂಗಳಿನಲ್ಲಿ ಸಿವಿಲ್ ಟೆಂಡರ್ ಆಗುವ ಸಾಧ್ಯತೆ ಇದೆ. 2032ಕ್ಕೆ ಆರೆಂಜ್ ಮಾರ್ಗ ಸಂಚಾರ ಮುಕ್ತ ಆಗಿರಲಿದೆ.








